ಚಿಕ್ಕಬಳ್ಳಾಪುರ: ಇಂತಹ ಬೆದರಿಕೆಗಳಿಗೆಲ್ಲಾ ನಾವು ಹೆದರಲ್ಲ. ಕಾನೂನುಗಳು ನಮಗೂ ಗೊತ್ತಿದೆ. ನಾ ಲಾ (Law) ಓದಿದ್ದೀನಿ ಬೊಮ್ಮಾಯಿ ಲಾ ಓದಿಲ್ಲ. ಇಂಜಿನಿಯರಿಂಗ್ ಓದಿರೋದು. ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ ಎಂದು ಪೇಸಿಎಂ (PayCM) ಪೋಸ್ಟರ್ ಅಭಿಯಾನದ ವಿರುದ್ಧ ಕಾನೂನು ಕ್ರಮ ಎಂಬ ಸಿಎಂ ಬಸವರಾಜ ಬೊಮ್ಮಾಯಿ (Basavarj Bommai) ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೋದಿ (Narendra Modi) 2018ರಲ್ಲಿ ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂದ್ರಲ್ಲ, ಈಗ ನಾ ಏನು ಅಂತ ಕರಿಯೋಣ. ಭ್ರಷ್ಟಾಚಾರ ಯಾರೇ ಮಾಡಲಿ ಅದು ಕಾನೂನು ಬಾಹಿರ. ಅದು ಸಾಮಾಜಿಕ ರೋಗ. ಅಭಿವೃದ್ಧಿಗೆ ಮಾರಕ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ
Advertisement
Advertisement
ಕೆಂಪಣ್ಣ ವಿರುದ್ದ ಕ್ರಮ ತಗೊಳ್ಳಿ
40% ಕಮಿಷನ್ ಅಂತ ಕೆಂಪಣ್ಣ ಹೇಳ್ತಾರಲ್ಲ. ಹಾಗಾದ್ರೆ ಕೆಂಪಣ್ಣನ ಮೇಲೆ ಕ್ರಮ ತಗೊಳ್ಳಿ. ಯಾಕೆ 1 ವರ್ಷ ಆದ್ರೂ ಕ್ರಮ ತಗೊಂಡಿಲ್ಲ. ಯಾಕೆ ಅಂದ್ರೆ ಇವರ ಬಣ್ಣ ಬಯಲಾಗುತ್ತೆ ಅಂತ ತಗೊಂಡಿಲ್ಲ. ಬಿಜೆಪಿಯವರು (BJP) ತಪ್ಪಿತಸ್ಥರು ಹಾಗಾಗಿ ಪಲಾಯನವಾದ ಮಾಡ್ತಿದ್ದಾರೆ. ಭ್ರಷ್ಟಾಚಾರ ವ್ಯಾಪಕವಾಗಿ ಈ ಸರ್ಕಾರದಲ್ಲಿ ನಡೀತಿದೆ. ಅದಕ್ಕೆ ಪಲಾಯನ ಮಾಡ್ತಿದ್ದಾರೆ. ಅಧಿವೇಶನದಲ್ಲಿ ಮಂಗಳವಾರ 40% ಕಮಿಷನ್ ಬಗ್ಗೆ ಚರ್ಚೆಗೆ ಅವಕಾಶ ಕೇಳಿದೆ. ಅದು ಚರ್ಚೆಗೆ ಬಾರದ ಹಾಗೆ ನೋಡಿಕೊಂಡ್ರು ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ಬೆಳಗಾವಿಯಲ್ಲೂ ಚರ್ಚೆ ಆಗಲಿಲ್ಲ ಈಗಲೂ ಆಗಲಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ
Advertisement
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅಲ್ಲ ಎಲ್ಲಾ ಬೆಲೆಗಳು ಗಗನಕ್ಕೆ ಏರಿದೆ. ಬೆಲೆ ಏರಿಸೋದು ಬಡವರ ಹೊಟ್ಟೆ ಮೇಲೆ ಹೊಡೆಯೋದು ಬಿಜೆಪಿ ಕೆಲಸ. ಬಡವರ ರಕ್ತ ಹಿರೋದು ಇವರ ಕಾಯಕ ಎಂದರು. ಇದೇ ವೇಳೆ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಲಿಂಗಾಯತ ಸಿಎಂ ಟಾರ್ಗೆಟ್ ಮಾಡಿದ ಹಾಗೆನಾ? ಒಂದು ಧರ್ಮದ ಬಗ್ಗೆ ಮಾತನಾಡಿದ ಹಾಗೆನಾ? ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದಾ? ನಮಗೆ ಎಲ್ಲಾ ಜಾತಿಯವರು ಒಂದೇ ಎಲ್ಲರೂ ಸಮಾನರು. ಜಾತಿ ಪ್ರಶ್ನೆ ಇಲ್ಲ ಭ್ರಷ್ಟಾಚಾರದ ಪ್ರಶ್ನೆ ಇರೋದು. 40% ಭ್ರಷ್ಟಾಚಾರ ಹೇಳಿದವರು ಯಾರು ಕೆಂಪಣ್ಣ. ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದಾರೆ.