ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ (Director Kiran Govi) ಅವರು ಹೃದಯಾಘಾತದಿಂದ (Heart Attack) ನಿಧನ ಹೊಂದಿದ್ದಾರೆ. ಪಯಣ (Payana), ಸಂಚಾರಿ, ಯಾರಿಗುಂಟು ಯಾರಿಗಿಲ್ಲ, ಸಿನಿಮಾಗಳಿಗೆ ನಿರ್ದೇಶನ (Direction) ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕ ಕಿರಣ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಹೊಸ ಮನೆ ಖರೀದಿಸಿದ ತೆಲುಗು ನಟ ನಾಗಚೈತನ್ಯ
50ನೇ ವಯಸ್ಸಿಗೆ ನಿರ್ದೇಶಕ ಕಿರಣ್ ಗೋವಿ (Kiran Govi) ಇಹಲೋಕ ತ್ಯಜಿಸಿದ್ದಾರೆ. ಬುಧವಾರದಂದು (ಮಾ.25) ಹೃದಯಾಘಾತವುಂಟಾಗಿತ್ತು. ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಯುವ ನಿರ್ದೇಶಕನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಸಂತಾಪ ಸೂಚಿಸಿದ್ದಾರೆ.
ಕಿರಣ್ ಗೋವಿ ಮೂಲತಃ ತುಮಕೂರಿನವರು. ಆದರೆ ಅವರ ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅವರ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಾರಣ ಕಿರಣ್ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು.