ಬೆಂಗಳೂರು: ಟ್ರಾಫಿಕ್ ಫೈನ್ (Traffic Fine) 50% ರಿಯಾಯಿತಿಯ (Discount) ಸಮಯವನ್ನು ವಿಸ್ತರಿಸುವುದಾಗಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ. ಈ ಕುರಿತು ನಾಳೆ (ಮಂಗಳವಾರ) ಅಧಿಕೃತ ಆದೇಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ದಂಡ ಪಾವತಿಸಲು ಫೆ.11 ಕೊನೆಯ ದಿನಾಂಕವಾಗಿತ್ತು. ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಜನರಿಂದ ಮನವಿ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದಂಡ ವಿನಾಯಿತಿಯ ಮುಂದುವರಿಕೆಗೆ ಸಂಚಾರ ವಿಶೇಷ ಆಯುಕ್ತ ಮನವಿ ಮಾಡಿದ್ದರು. 2 ವಾರಗಳ ಕಾಲ ವಿನಾಯಿತಿ ವಿಸ್ತರಣೆಗೆ ಮನವಿ ಮಾಡಲಾಗಿದೆ. ನಾಳೆ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಫೆ. 14 ರಿಂದ ಫೆ. 28ರವರೆಗೆ ಮುಂದುವರಿಸುವ ಚಿಂತನೆ ಇದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಚರ್ಚ್‌ಗೆ ಬೆಂಕಿ ಹಾಕಿ, ಗೋಡೆ ಮೇಲೆ ರಾಮ ಎಂದು ಬರೆದ ಕಿಡಿಗೇಡಿಗಳು
ರಿಯಾಯಿತಿಯ ಕುರಿತು ಸರ್ಕಾರವನ್ನು ಒಪ್ಪಿಸಲು ನಮಗೆ ಮೂರು ತಿಂಗಳು ಕಾಲಾವಕಾಶ ಹಿಡಿಯಿತು. ಇದೀಗ ದಂಡ ಪಾವತಿ ಮಾಡುವ ಅವಧಿ ವಿಸ್ತರಣೆಗೆ ಕಾಲಾವಕಾಶ ಕೇಳಿದರು. ಈ ಕುರಿತು ವಿಶೇಷ ಆಯುಕ್ತರು ಪತ್ರ ಸಹ ಬರೆದಿದ್ದರು. ಜೊತೆಗೆ ಹಲವರು ಸಮಯ ವಿಸ್ತರಿಸಲು ಕಾಲಾವಕಾಶ ಕೇಳಿದ್ದರು. ಹೀಗಾಗಿ ದಂಡ ಕಟ್ಟಲು ಮತ್ತೆ ಕಾಲಾವಕಾಶ ನೀಡುವ ಚಿಂತನೆ ನಡೆಸಲಾಗಿದೆ. ಇನ್ನೂ ಎರಡು ಕೋಟಿಯಷ್ಟು ಟ್ರಾಫಿಕ್ ಕೇಸ್‍ಗಳು ಬಾಕಿಯಿವೆ. 800 ಕೋಟಿ ರೂ.ಗೂ ಹೆಚ್ಚು ಫೈನ್ ಹಣ ಸಂಗ್ರಹವಾಗಬೇಕಿದೆ ಎಂದರು. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಷ್ಯಾದಿಂದ 13 ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k