ಹಾಸನದಲ್ಲಿ Pay MLA ಅಭಿಯಾನ- BJP ಕಾರ್ಯಕರ್ತರಿಂದ ಪೊಲೀಸರಿಗೆ ದೂರು

Public TV
1 Min Read
pay mla hassan.1

ಹಾಸನ: ಕಾಂಗ್ರೆಸ್‌ನಿಂದ (Congress) ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಆರಂಭಿಸಿದ್ದು, ಹಾಸನದಲ್ಲಿ (Hassan) ಬಿಜೆಪಿ (BJP) ಶಾಸಕರ ವಿರುದ್ಧ ಪೇ ಎಂಎಲ್‌ಎ (Pay MLA) ಅಭಿಯಾನ ಶುರುವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೇ ಎಂಎಲ್‌ಎ ಎಂಬ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ. ಶಾಸಕ ಪ್ರೀತಂಗೌಡ (Preetam Gowda) ವಿರುದ್ಧ 50% ಕಮೀಷನ್ ಪೇ ಎಂಎಲ್‌ಎ ಎಂಬ ಪೋಸ್ಟ್‌ನ್ನು ಡಾ. ಸೂರಜ್ ರೇವಣ್ಣ ದೊಡ್ಮನೆ ಹುಡುಗ ಎಂಬ ಫೇಸ್‌ಬುಕ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಪೇ ಎಂಎಲ್‌ಎ 50% ಪೋಸ್ಟ್‌ಗೆ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

hassan bjp pay mla

ಡಿವೈಎಸ್‌ಪಿ ಉದಯ್‌ಭಾಸ್ಕರ್‌ಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಶಾಸಕರು ವಿರುದ್ಧ ಪೇ ಎಂಎಲ್‌ಎ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದ ಇಪ್ಪತ್ತು ವರ್ಷದಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು ಶಾಸಕ ಪ್ರೀತಂಗೌಡ ಮಾಡಿದ್ದಾರೆ. ಇದನ್ನು ಸಹಿಸದ ಕೆಲವರು ಪೇ ಎಂಎಲ್‌ಎ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ ಎಂದರು.

proud mla hassan

ಇನ್ನೊಂದೆಡೆ ಪೇ ಎಂಎಲ್‌ಎ ಪೋಸ್ಟ್ ವಿರುದ್ಧ Proud MLA 100% Again MLA ಅಭಿಯಾನ ಆರಂಭಿಸಿದ್ದಾರೆ. ಹಾಸನ ಜನಮನ ಗೆದ್ದ ಫರ್‌ಫೆಕ್ಟ್ ಎಂಎಲ್‌ಎ, ಹಾಸನ ಕಂಡ ಅಭಿವೃದ್ಧಿ ಹರಿಕಾರ ಎಂಬ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *