ವಾಷಿಂಗ್ಟನ್: ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆಯೇ ಅದರ ಕಾರ್ಯವೈಖರಿ ಸೇರಿದಂತೆ ಹೆಚ್ಚಿನ ವಿಷಯಗಳು ಬದಲಾಗುತ್ತವೆ ಎಂದು ತಿಳಿಸಲಾಗಿತ್ತು. ಅದರಂತೆಯೇ ಇದೀಗ ಮಸ್ಕ್ ಬ್ಲೂ ಟಿಕ್ (Blue Tick) ಮಾರ್ಕ್ ಹೊಂದಿರುವ ಖಾತೆಗಳಿಗೆ ಪಾವತಿ ಮಾಡುವ ಹೊಸ ಯೋಜನೆಯನ್ನು ದೃಢಪಡಿಸಿದ್ದಾರೆ.
ಹಲವು ಟೀಕೆಗೆ ಒಳಗಾಗಿಯೂ ಮಸ್ಕ್ ಇದೀಗ ಬಳಕೆದಾರರ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಬೇಕೆಂದರೆ ತಿಂಗಳಿಗೆ 8 ಡಾಲರ್ (ಸುಮಾರು 661 ರೂ.) ಪಾವತಿಸಬೇಕು ಎಂದಿದ್ದಾರೆ. ಒಂದು ವೇಳೆ ಇಲ್ಲಿಯವರೆಗೆ ಬ್ಲೂ ಟಿಕ್ ಹೊಂದಿದ್ದ ಬಳಕೆದಾರರು ಪ್ರತಿ ತಿಂಗಳು ನಿಗದಿತ ಪಾವತಿಯನ್ನು ಮಾಡದೇ ಹೋದಲ್ಲಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಪ್ರಸ್ತುತ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಅಥವಾ ಹೊಂದದೇ ಇರುವ ಬಳಕೆದಾರರ ವ್ಯವಸ್ಥೆ ಮೂರ್ಖತನವಾಗಿದೆ. ಈಗ ಎಲ್ಲಾ ಶಕ್ತಿ ಜನರಿಗೆ! ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ 8 ಡಾಲರ್ ಪಾವತಿಸಿ ಎಂದು ಬರೆದಿದ್ದಾರೆ.
Advertisement
ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಬಳಕೆದಾರರ ಪರಿಶೀಲಿಸಿದ ಖಾತೆಯಲ್ಲಿ ಕಾಣಿಸಿಕೊಳ್ಳುವ ಬ್ಲೂ ಟಿಕ್‌ಗೆ ತಿಂಗಳಿಗೆ 19.99 ಡಾಲರ್ (ಸುಮಾರು 1,600 ರೂ.) ಪಾವತಿಸಬೇಕಾಗಬಹುದು ಎಂದು ವರದಿಯಾಗಿತ್ತು. ಈ ವರದಿಗೆ ಇದೀಗ ಮಸ್ಕ್ ಉತ್ತರಿಸಿ, ತಿಂಗಳಿಗೆ 8 ಡಾಲರ್ ಅನ್ನು ನಿಗದಿಪಡಿಸಿದ್ದಾರೆ. ಇದನ್ನೂ ಓದಿ: ಪರಾಗ್ ಸ್ಥಾನಕ್ಕೆ ಶ್ರೀರಾಮ್ – ಮತ್ತೆ ಭಾರತೀಯನಿಗೆ ಒಲಿಯುತ್ತಾ ಟ್ವಿಟ್ಟರ್ ಪಟ್ಟ?
Advertisement
ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ:
ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಆಪ್‌ನಲ್ಲಿ ಮಾತ್ರವೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ತನ್ನ ಉದ್ಯೋಗಿಗಳಿಗೂ (Employees) ಬಿಗಿಯಾದ ನಿಯಮಗಳನ್ನು ತಂದಿರುವುದಾಗಿ ವರದಿಯಾಗಿದೆ. ಟ್ವಿಟ್ಟರ್‌ನ ಕೆಲ ಎಂಜಿನಿಯರುಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ 7 ದಿನವೂ ಕೆಲಸ ಮಾಡಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ