ಹೊಂಬಾಳೆ ಬ್ಯಾನರ್‌ನ (Hombale Films) ಬಹುನಿರೀಕ್ಷಿತ ‘ಧೂಮ್’ (Dhoom) ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿದೆ. ಪವನ್ ಕುಮಾರ್ (Pawan Kumar) ಮತ್ತು ಸೌತ್ ಸ್ಟಾರ್ ಫಾಸಿಲ್ (Fahadh Faasil) ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
View this post on Instagram
ಸಾಕಷ್ಟು ಸಿನಿಮಾಗಳನ್ನ ಅದರಲ್ಲೂ ಕೆಜಿಎಫ್ (KGF) ಅಂತಹ ಅದ್ಭುತ ಚಿತ್ರವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಬ್ಯಾನರ್‌ನಲ್ಲಿ ‘ಧೂಮ್’ ಸಿನಿಮಾ ಮೂಡಿ ಬರುತ್ತಿದೆ. ʼಪುಷ್ಪʼ ಸ್ಟಾರ್ ಫಹಾದ್ ಫಾಸಿಲ್‌ಗೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಧೂಮ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಇದನ್ನೂ ಓದಿ: `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ
ಈ ಚಿತ್ರದ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಪರ್ಣಾ ಬಾಲಮುರಳಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡಕ್ಕೆ ಶುಭಹಾರೈಸಲು ಪ್ರಶಾಂತ್ ನೀಲ್ ಕೂಡ ಪಾಲ್ಗೊಂಡಿದ್ದಾರೆ.
ಅಪ್ಪುಗಾಗಿ ಮಾಡಿರುವ ಕಥೆಯಲ್ಲಿ ಫಾಸಿಲ್ ನಟಿಸುತ್ತಿದ್ದಾರಾ ಅಥವಾ ಫಾಸಿಲ್‌ಗೆ ಬೇರೆಯದ್ದೇ ಕಥೆಯನ್ನ ಪವನ್ ಕುಮಾರ್ ಸಿದ್ಧಪಡಿಸಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮನೆಯಲ್ಲಿ ಮಾಡಿದ ಛತ್ರಿ ಕೆಲಸದ ಬಗ್ಗೆ ಬಾಯ್ಬಿಟ್ಟ ಅಮೂಲ್ಯ ಗೌಡ