ದಿಸ್ಪುರ್: ಕಾಂಗ್ರೆಸ್ ಮುಖಂಡ ಪವನ್ ಖೇರಾ (Pawan Khera) ಅವರ ಬಂಧನ ಹಾಗೂ ಬಿಡುಗಡೆಯ ಬಳಿಕ ಅವರು ನೀಡಿದ್ದ ಹೇಳಿಕೆಗೆ ಬೆಷರತ್ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರು ಗೌರವಕ್ಕೆ ಧಕ್ಕೆ ಬರುವಂತಹ ಯಾವ ಪದಗಳನ್ನು ಬಳಸುವದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಶುಕ್ರವಾರ ಟ್ವೀಟ್ ಮಾಡಿದ್ದಾರೆ.
Advertisement
ರಾಯ್‍ಪುರದ (Raipur) ಕಾಂಗ್ರೆಸ್ ಮಾಹಾಧಿವೇಶನಕ್ಕೆ (Congress plenary session) ತೆರಳಲು ವಿಮಾನವೇರಿದ್ದ ಪವನ್ ಖೇರಾ ಅವರನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದರು. ಖೇರಾ ಅವರ ವಿರುದ್ಧ ಕ್ರಿಮಿನಲ್ ಸಂಚು, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕೋಮು ಸೌಹಾರ್ದತೆಗೆ ಪ್ರಚೋದಿಸಿದ ಆರೋಪ ದಾಖಲಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಐಜಿಪಿ ಮತ್ತು ವಕ್ತಾರ ಪ್ರಶಾಂತ ಕುಮಾರ್ ಭುಯಾನ್ ತಿಳಿಸಿದ್ದರು. ಇದನ್ನೂ ಓದಿ: ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ
Advertisement
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k