-ದಟ್ಟ ಹೊಗೆಯಿಂದ ಉಸಿರಾಟದ ತೊಂದರೆ
ಸಿಂಗಾಪುರ: ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಕಿರಿಯ ಮಗ ಓದುತ್ತಿದ್ದ ಸಿಂಗಾಪುರ (Singapore) ಶಾಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಪುತ್ರ ಮಾರ್ಕ್ ಶಂಕರ್ ಗಂಭೀರ ಗಾಯಗೊಂಡಿದ್ದಾರೆ.
ಬೆಂಕಿ ಅವಘಡದಲ್ಲಿ ಶಂಕರ್ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪವನ್ ಕಲ್ಯಾಣ್ ಪುತ್ರನನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು
ಪವನ್ ಕಲ್ಯಾಣ್ ಹಾಗೂ ಅನ್ನಾ ದಂಪತಿಗೆ 2017ರಲ್ಲಿ ಮಾರ್ಕ್ ಶಂಕರ್ ಜನಿಸಿದರು. ಸದ್ಯ ಪವನ್ ಕಲ್ಯಾಣ್ ಮೂರನೇ ಹೆಂಡತಿ ಅನ್ನಾ ಸಿಂಗಪುರದಲ್ಲೇ ಇದ್ದಾರೆ. ಮಾರ್ಕ್ ಶಂಕರ್ ಕೂಡ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ದರ್ಶನ್ ಗೈರು – ಬೆಂಗಳೂರು ಕೋರ್ಟ್ ಅಸಮಾಧಾನ