ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ (Tirupati Temple) ಲಡ್ಡು ವಿವಾದ ಹಿನ್ನೆಲೆಯಲ್ಲಿ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರಿಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತ್ರ ಪ್ರಾಯಶ್ಚಿತ ದೀಕ್ಷೆ ಕೈಬಿಟ್ಟಿದ್ದಾರೆ.
About 14 months back, when VARAHI first hit the roads, it was more than just a movement, it was a call to action. Andhra Pradesh was suffocating under YSRCP’s autocratic rule and Varahi became the symbol of strength, sparking courage in every corner of the state. It gave people… pic.twitter.com/PcxkhkryEj
— Pawan Kalyan (@PawanKalyan) October 2, 2024
Advertisement
ವೆಂಗಮಾಂಬ ಅನ್ನಛತ್ರಕ್ಕೆ ತೆರಳಿ ಊಟ ಮಾಡಿದ್ದಾರೆ. ದೇವಸ್ಥಾನಕ್ಕೆ ತೆರಳುವ ಮುನ್ನ, ಕ್ರೈಸ್ತ ಧರ್ಮೀಯರಾದ ಪವನ್ ಕಲ್ಯಾಣ್ ಕಿರಿಯ ಪುತ್ರಿ ಪೊಲೆನಾ ಅಂಜನಾ, ತಮಗೆ ವೆಂಕಟೇಶ್ವರ ಸ್ವಾಮಿಯಲ್ಲಿ ನಂಬಿಕೆ ಇದೆ ಎಂದು ಫೇತ್ ಡಿಕ್ಲರೇಷನ್ ನೀಡಿದ್ರು. ಪೊಲೆನಾ ಅಪ್ರಾಪ್ತರಾಗಿರುವ ಕಾರಣ ತಂದೆ ಪವನ್ ಕಲ್ಯಾಣ್ ಕೂಡ ಸಹಿ ಹಾಕಿದ್ರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ 100 ಬಾರಿ ಯೋಚಿಸಿ ಮಾತನಾಡಿ: ಕಾರ್ತಿ ವಿರುದ್ಧ ಪವನ್ ಕಲ್ಯಾಣ್ ಕಿಡಿ
Advertisement
ಇತ್ತೀಚಿಗೆ ತಿರುಪತಿಗೆ ಹೊರಟಿದ್ದ ಮಾಜಿ ಸಿಎಂ ಜಗನ್, ಫೇತ್ ಡಿಕ್ಲರೇಷನ್ ಕೊಡಬೇಕು ಎಂದು ತೆಲುಗುದೇಶಂ, ಬಿಜೆಪಿ, ಜನಸೇನಾ ಪಕ್ಷಗಳು ಪಟ್ಟು ಹಿಡಿದಿದವು. ಹೀಗಾಗಿ ಬುಧವಾರ ಪವನ್ ಕಲ್ಯಾಣ್ ಪುತ್ರಿ ನೀಡಿದ ಡಿಕ್ಲರೇಷನ್ ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ
Advertisement
Advertisement
ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಪ್ರಾಯಶ್ಚಿತ ದೀಕ್ಷೆಯಾಗಿ 11 ದಿನಗಳ ಉಪವಾಸ ಕೈಗೊಂಡಿದ್ದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ʻತಿರುಪತಿ ಲಡ್ಡು ಅಂದರೆ ಅಮೃತಕ್ಕೆ ಸಮನಾಗಿ ನೋಡುತ್ತೇವೆ. ತಿರುಮಲ ಲಡ್ಡು ಪ್ರಸಾದ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕ. ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬೆರಸಿರುವುದು ಗೊತ್ತಾದ ಕ್ಷಣವೇ ಬೆಚ್ಚಿಬಿದ್ದೆ. ತಪ್ಪಿತಸ್ಥ ಎಂಬ ಭಾವನೆ, ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲಿ ಇಂತಹ ತೊಂದರೆಗಳು ಗಮನಕ್ಕೆ ಬಾರದಿರುವುದು ನೋವು ತಂದಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕುʼ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ