– ನೀರ್ ದೋಸೆ, ಮಶ್ರೂಮ್ ಗೀರೋಸ್ಟ್ ರೆಡಿ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ (Sri Krishna Mutt) ನಡೆಯುತ್ತಿರುವ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಭಾಗಿಯಾಗಲಿದ್ದಾರೆ. ವಿಶೇಷ ವಿಮಾನದ ಮೂಲಕ ಅವರು ಮಂಗಳೂರಿಗೆ ಆಗಮಿಸಿ ಉಡುಪಿ ತಲುಪಿದ್ದಾರೆ.
ಪರ್ಯಾಯ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ತಿಂಗಳ ಹಿಂದೆ ಪೇಜಾವರ ಸ್ವಾಮೀಜಿ ಉದ್ಘಾಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದು ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅತಿಥಿಯಾಗಿ ಭಾಗಿಯಾಗಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಅವರು ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ಸ್ವಾಮೀಜಿಗಳ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಮಠದ ರಾಜಾಂಗಣದಲ್ಲಿ ನಡೆಯುವ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಪವನ್ ಕಲ್ಯಾಣ್‌ಗಾಗಿ ನೀರುದೋಸೆ, ಮಶ್ರೂಮ್ ಗೀ ರೋಸ್ಟ್, ಪತ್ರೊಡೆ, ಶ್ಯಾವಿಗೆ, ಪನ್ನೀರ್ ಲಬಾಬ್ದಾರ್, ರೋಟಿ, ಗೀ ರೈಸ್, ದಾಲ್ ವೆರೋವಲಿ, ಪಾಯಸ, ಪುಲ್ಕ ವಿದ್ ಪನ್ನೀರ್ ಮಿಂಟ್ ಚಿಲ್ಲಿ, ಅನ್ನ, ಉಡುಪಿ ರಸಂ, ರಾಗಿ ಮಣ್ಣಿ ಸಿದ್ಧಪಡಿಸಲಾಗಿದೆ.

