ಚಿಕ್ಕಬಳ್ಳಾಪುರ: ನಿರ್ವಹಣೆಯಿಲ್ಲದೇ ಪಾಳು ಕೊಂಪೆಯಾಗಿದ್ದ ಸರ್ ಎಂ. ವಿಶ್ವೇಶ್ಚರಯ್ಯನವರು (Sir M. Visvesvaraya) ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಗೆ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳು (Pawan Kalyan Fans) ಮರುಜೀವ ತುಂಬಿದ್ದಾರೆ.
ಹೌದು. ಭಾರತ ರತ್ನ ಸರ್ ಎಂ. ವಿಶ್ವೇಶ್ಚರಯ್ಯನವರು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯೊಂದು ನಿರ್ವಹಣೆ ಮಾಡದೆ ಪಾಳುಕೊಂಪೆಯಾಗಿ ಮೂಲೆಗುಂಪಾಗಿತ್ತು. ಇದನ್ನ ಗಮನಿಸಿದ ಪವನ್ ಕಲ್ಯಾಣ್ ಅಭಿಮಾನಿಗಳು, ಪವನ್ ಕಲ್ಯಾಣ್‌ರ ಹುಟ್ಟುಹಬ್ಬದ (Pawan Kalyan Birthday) ಪ್ರಯುಕ್ತ ಸರ್ಕಾರಿ ಶಾಲೆ ನವೀಕರಣ ಮಾಡುವುದರ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಸಿನಿಮಾಕ್ಕಾಗಿ ಹಾಡಿದ ಶ್ರೀ ವಿದ್ಯಾಭೂಷಣ್; ಸುಧೀರ್ ಅತ್ತಾವರ್ ಸಾಹಿತ್ಯ
ವಿಶ್ವೇಶ್ವರಯ್ಯನವರು ಪ್ರಾಥಮಿಕ ಶಿಕ್ಷಣ ಪಡೆದ ಚಿಕ್ಕಬಳ್ಳಾಪುರ ನಗರದ ಕಂದವಾರ ಸರ್ಕಾರಿ ಶಾಲೆ ಶಿಕ್ಷಣ ಇಲಾಖೆ ಉದಾಸೀನದಿಂದ ಸೂಕ್ತ ನಿರ್ವಹಣೆ ಬಳಲುತ್ತಿತ್ತು. ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್
ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೇ ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದನ್ನು ಗಮನಿಸಿದ ಖ್ಯಾತ ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳು, ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಶಾಲೆಯ ಆವರಣ, ಕಟ್ಟಡಗಳ ಸುತ್ತಮುತ್ತ, ಕೊಠಡಿಗಳ ಸ್ವಚ್ಛತೆ ನವೀಕರಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೂ ಭಾರತ ರತ್ನ ಸರ್.ಎಂ ವಿಶ್ವೇಶ್ಚರಯ್ಯನವರ ಪ್ರೇರಣೆಯಿಂದ ಕೆಲವರು ದೊಡ್ಡ ದೊಡ್ಡ ಉದ್ಯಮಿಗಳು, ಖ್ಯಾತ ಇಂಜಿನಿಯರ್‌ಗಳಾಗಿದ್ದಾರೆ. ಯುವ ಪೀಳಿಗೆಗೆ ವಿಶ್ವೇಶ್ವರಯ್ಯನವರ ಮೌಲ್ಯಗಳನ್ನು ಪರಿಚಯ ಮಾಡಲು ಅವರು ವಿದ್ಯಾಬ್ಯಾಸ ಮಾಡಿದ ಶಾಲೆಯನ್ನು ಮ್ಯೂಸಿಯಂ ಮಾಡುವುದಿರಲಿ ಶಾಲಾ ಶಿಕ್ಷಣ ಇಲಾಖೆ ನಿರ್ವಹಣೆಯನ್ನೂ ಮಾಡುತ್ತಿಲ್ಲ, ಕೊನೆಗೆ ಪವನ್ ಕಲ್ಯಾಣ್ ಅಭಿಮಾನಿಗಳು ನವೀಕರಣ ಕಾರ್ಯ ಮಾಡಿದ್ದಕ್ಕೆ ಸ್ಥಳೀಯರು ಶ್ಲಾಘಿಸಿದ್ರು. ಇದನ್ನೂ ಓದಿ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್