ಅಮರಾವತಿ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.
ಅರಪಚಿತ ವ್ಯಕ್ತಿಯೊಬ್ಬರು ಪವನ್ ಕಲ್ಯಾಣ್ ಇಲ್ಲದಿದ್ದಾಗ, ಅವರ ಕಚೇರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಉಪಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪದಗಳನ್ನ ಬಳಸಿ, ಬೆದರಿಕೆ ಸಂದೇಶಗಳನ್ನು ಕಳುಸಹಿಲಾಗಿದೆ. ನಾವು ಅವರ ಪಕ್ಕದಲ್ಲೇ ಇದ್ದೇಕೆ, ಅವರನ್ನು ಕೊಲ್ಲುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ಆತಂಕಗೊಂಡ ಸಿಬ್ಬಂದಿ ತಕ್ಷಣ ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.
Advertisement
ತಕ್ಷಣ ಪ್ರತಿಕ್ರಿಯಿಸಿರುವ ಉನ್ನತ ಪೊಲೀಸ್ ಅಧಿಕಾರಿಗಳು, ಪವನ್ ಕಲ್ಯಾಣ್ ಸಿಬ್ಬಂದಿಗೆ ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಎಂದು ವಿಚಾರಣೆ ನಡೆಸಲಾಗುತ್ತಿದೆ. ಪವನ್ ಹೊರತಾಗಿ ಬೇರೆ ಯಾವುದೇ ಸಚಿವರಿಗೆ ಇಂತಹ ಕರೆಗಳು ಬಂದಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಜೈಲಲ್ಲಿ ನಿಲ್ಲದ ಕರ್ಮಕಾಂಡ – ಕಲಬುರಗಿ ಜೈಲು ಅಧೀಕ್ಷಕಿ ವಿರುದ್ಧ ವಿಡಿಯೋ ಮಸಲತ್ತು!
Advertisement
Advertisement
ಪವನ್ ಸಿಬ್ಬಂದಿಗೆ ಈ ಕರೆಗಳು ಮತ್ತು ಸಂದೇಶಗಳು ಯಾವಾಗ ಬಂದವು ಎಂಬ ವಿವರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಪವನ್ ಗೆ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ದುಬೈ; ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆ.9ರಂದು ಅದ್ಧೂರಿ ಬ್ಯಾರಿ ಮೇಳ