ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಸಂಬಂಧದ ಬಗ್ಗೆ ಏನೆಲ್ಲ ಸುದ್ದಿಗಳು ಹರಿದಾಡಿದವು. ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ದೊಡ್ಡ ಗಲಾಟೆಯೇ ಮಾಡಿದರು. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಮೈಸೂರು ಹೋಟೆಲ್ ವೊಂದರಲ್ಲಿ ಸಿಕ್ಕಾಕಿಕೊಂಡು ಈ ಘಟನೆಗೆ ಬೇರೆಯದ್ದೇ ದಿಕ್ಕು ತೋರಿಸಿದರು. ಈ ಘಟನೆ ಅಲ್ಲಿಗೆ ನಾನಾ ರೂಪ ಪಡೆದುಕೊಂಡಿತು.
Advertisement
ಅಷ್ಟಾಗಿಯೂ ನರೇಶ್ ಮತ್ತು ಪವಿತ್ರಾ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಿನ್ನೆಯಷ್ಟೇ ಇಬ್ಬರೂ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ (Video) ಸಖತ್ ವೈರಲ್ ಕೂಡ ಹಾಕಿದೆ. ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಇಟ್ಟು ಸಖತ್ ರೊಮ್ಯಾಂಟಿಕ್ (Romantic) ಆಗಿ ನರೇಶ್ ಮಾತನಾಡಿದ್ದಾರೆ. ತಾವಿಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್
Advertisement
Advertisement
ಖ್ಯಾತ ತೆಲುಗು ನಟ ಅಲಿ ಆಲಿ ನಿರ್ಮಿಸಿ, ನಟಿಸಿರುವ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಆಹಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ಲೋಕೇಶ್ ಪಾತ್ರವನ್ನು ಮೆಚ್ಚಿ ತುಂಬಾ ಜನರು ಸಂದೇಶ ಕಳುಹಿಸಿದ್ದಾರಂತೆ. ಅದಕ್ಕಾಗಿ ನರೇಶ್ ಮತ್ತು ಪವಿತ್ರಾ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
Advertisement
ಈ ವಿಡಿಯೋ ನೋಡಿದ ಅನೇಕರು ಈ ಜೋಡಿಯ ರಿಲೇಶನ್ ಶಿಪ್ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇಷ್ಟೊಂದು ಕ್ಲೋಸ್ ಆಗಿ, ರೊಮ್ಯಾಂಟಿಕ್ ಆಗಿ ಇರುವ ಜೋಡಿಯನ್ನು ಕಂಡರೆ ಎಲ್ಲರಿಗೂ ಹಾಗೆಯೇ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಜೋಡಿಯ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಹಾಕಿದ್ದಾರೆ.