ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ (Pavithra Gowda) ಅವರ ಮನೆಯಲ್ಲಿದ್ದ ಶ್ವಾನಗಳನ್ನು ಅಧಿಕಾರಿಗಳು ದರ್ಶನ್ (Darshan) ಮನೆಗೆ ಶಿಫ್ಟ್ ಮಾಡಿದ್ದಾರೆ.
ಪವಿತ್ರ ಗೌಡ ಮನೆಯಲ್ಲಿದ್ದ ಬುಲ್ ಡಾಗ್ (Bulldog) ಹಾಗೂ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಪವಿತ್ರಾ ಮನೆಯಲ್ಲಿ ಪವನ್ ಈ ಶ್ವಾನಗಳನ್ನ ನೋಡಿಕೊಳ್ಳುತ್ತಿದ್ದ. ಆತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ಕಂಬಿ ಹಿಂದೆ ಸೇರಿದ್ದಾನೆ. ಇದರಿಂದ ಮನೆಯಲ್ಲಿ ಶ್ವಾನವನ್ನ ನೋಡಿಕೊಳ್ಳಲು ಯಾರು ಇಲ್ಲದ ಕಾರಣ ನಾಯಿಗಳು ಸೊರಗಿ ಹೋಗಿದ್ದವು. ಇದೇ ಕಾರಣಕ್ಕೆ ಶ್ವಾನಗಳನ್ನ ಅಧಿಕಾರಿಗಳು ದರ್ಶನ್ ಮನೆಗೆ ಸ್ಥಳಾಂತರಿಸಿದ್ದಾರೆ.
ಶ್ವಾನಗಳು ಸೊರಗಿ ಹೋಗುತ್ತಿರುವ ವಿಚಾರ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಹಾಗೂ ಲೀನಾ ಅವರು ಆರ್.ಆರ್ ನಗರ ಪೆÇಲೀಸ್ ಠಾಣೆ ಮತ್ತು ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ಅಧಿಕಾರಿಗಳ ನೆರವಿನಿಂದ ಪವಿತ್ರಾಗೌಡ ಮನೆಯಲ್ಲಿದ್ದ ಎರಡು ಶ್ವಾನಗಳನ್ನ ದರ್ಶನ್ ಮನೆಗೆ ಶಿಫ್ಟ್ ಮಾಡಿದ್ದಾರೆ. ಉಳಿದ ಮತ್ತೊಂದು ಶ್ವಾನವನ್ನ ಪವಿತ್ರಾ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರೆ.
ಇದೀಗ ದರ್ಶನ್ ಮನೆಯಲ್ಲಿ 2 ನಾಯಿಗಳ ಪಾಲನೆ ಮಾಡಲಾಗುತ್ತಿದ್ದು, ಅವುಗಳು ಸುರಕ್ಷಿತವಾಗಿವೆ ಎಂದು ತಿಳಿದು ಬಂದಿದೆ.