ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ (Renukaswamy Case) ಜೈಲು ಸೇರಿರುವ ಪವಿತ್ರಾ ಗೌಡಗೆ (Pavitra Gowda) ಜೈಲೂಟದಿಂದ ಅಲರ್ಜಿಯಾಗಿದ್ದು, ಚರ್ಮರೋಗ ಸಮಸ್ಯೆಯುಂಟಾಗಿದೆ.
ನ್ಯಾಯಾಲಯದಲ್ಲಿ ಪವಿತ್ರಗೌಡ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿ, ಪವಿತ್ರಗೌಡಗೆ ಜೈಲೂಟದಿಂದ ಸಮಸ್ಯೆ ಆಗ್ತಿದೆ. ಚರ್ಮರೋಗದಿಂದ ಬಳಲುತ್ತಿದ್ದಾರೆ. ಮೈಮೇಲೆ ಗುಳ್ಳೆಗಳು ಆಗುತ್ತಿದೆ. ಅದಕ್ಕಾಗಿಯೇ ನಾವು ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದು, ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗ್ತಿದೆ ಎಂದು ವಾದಿಸಿದರು. ಇದನ್ನೂ ಓದಿ: ಬಳ್ಳಾರಿ ಗಲಭೆ ಕೇಸ್; ಪ್ರಕರಣ ಸಿಐಡಿಗೆ ವಹಿಸಿ ಸರ್ಕಾರ ಆದೇಶ
avitra
ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ ವಕೀಲರು, ಜೈಲಾಧಿಕಾರಿಗಳು, ಪೊಲೀಸರು ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸುತ್ತಿದ್ದಾರೆ. ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ. ಇದೇ ಪರಪ್ಪನ ಅಗ್ರಹಾರಕ್ಕೆ ಮೊಬೈಲ್, ಗಾಂಜಾ ಎಲ್ಲವನ್ನೂ ಸಪ್ಲೆöÊ ಮಾಡ್ತಾರೆ. ಆರೋಪಿಗಳ ಬಳಿ ಹಣ ಪಡೆದು ಇದೆಲ್ಲಾ ಸೇವೆ ಕೊಡ್ತಾರೆ. ಆದರೆ ಮನೆ ಊಟಕ್ಕೆ ವಿರೋಧ ವ್ಯಕ್ತಪಡಿಸ್ತಾ ಇರೋದು ಸರಿಯಲ್ಲ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೋಮವಾರಕ್ಕೆ (ಜ.12) ಆದೇಶ ಕಾಯ್ದಿರಿಸಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ – ಮಾಜಿ ಸಚಿವ ಬಿ.ನಾಗೇಂದ್ರಗೆ CBI ನೋಟಿಸ್

