– ಮಾಧ್ಯಮದಲ್ಲಿ ಬರಲು ವಿನಯ್ ಭೇಟಿ ಮಾಡಿದ್ದ ಶ್ವೇತಾ?
ಬೆಂಗಳೂರು: ಭಾರೀ ಸದ್ದು ಮಾಡುತ್ತಿರುವ 2.5 ಕೋಟಿ ಚಿನ್ನಾಭರಣ (Gold) ವಂಚನೆ ಪ್ರಕರಣದ (Fraud Case) ವಿಚಾರವಾಗಿ ಪವಿತ್ರಾ ಗೌಡ (Pavithra Gowda) ಸ್ನೇಹಿತೆ ಸಮತಾ (Samatha) ಪ್ರತಿಕ್ರಿಯಿಸಿದ್ದು, ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
Advertisement
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಶ್ವೇತಾಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಶ್ವೇತಾಗೌಡಗೆ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಪವಿತ್ರಗೌಡಳನ್ನು ಭೇಟಿ ಆಗಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಈ ವೇಳೆ ಶ್ವೇತಾಗೌಡ ಪರಿಚಯ ಮಾಡಿಕೊಂಡರು. ನಾನು ವಿನಯ್ ಅಣ್ಣನಿಗೆ ಪರಿಚಯ ನೋಡೋಕೆ ಬಂದಿದ್ದೆ ಎಂದಿದ್ರು. ಅವತ್ತೇ ನಾನು ಆಕೆಯನ್ನು ಭೇಟಿ ಮಾಡಿದ್ದು ಎಂದಿದ್ದಾರೆ.
Advertisement
Advertisement
ಜೈಲಿನಿಂದ ಹೊರಗೆ ಬರುತ್ತಿದ್ದಾಗ ನನ್ನ ಜೊತೆಗೆ ಆಕೆ ಬಂದಿದ್ರು. ಜೊತೆಗೆ ಆಟೋದಲ್ಲಿ ಕಾರಿನ ತನಕ ಡ್ರಾಪ್ ಕೊಡಿ ಎಂದು ಆಟೋ ಹತ್ತಿಕೊಂಡ್ರು. ಅದು ಹೊರತುಪಡಿಸಿ ಶ್ವೇತಗೌಡಗೆ ನನಗೂ ಯಾವುದೇ ಸಂಬಂಧ ಇಲ್ಲ. ಈಗ ವಂಚನೆ ಕೇಸ್‍ಗಳು ಬೆಳಕಿಗೆ ಬರುತ್ತಿವೆ. ವಿನಯ್‍ಗೆ ಕೂಡ ಆಕೆಯ ಪರಿಚಯ ಇಲ್ಲ. ಮಾಧ್ಯಮಗಳಲ್ಲಿ ಬರೋಕೆ ಆಕೆ ಬಂದಿದ್ದಾಳೆ ಅಷ್ಟೇ ಎಂದು ಆರೋಪಿಸಿದ್ದಾರೆ.
Advertisement
ರೇಣುಕಾಸ್ವಾಮಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ, ಪವಿತ್ರಗೌಡ ನಾನು ಮೂರು ವರ್ಷದಿಂದ ಸ್ನೇಹಿತರು. ಅದು ಬಿಟ್ಟರೆ ಕೊಲೆ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ಕೆಲವೊಂದು ಮಸೇಜ್‍ಗಳ ಬಗ್ಗೆ ಮಾತಾಡಿದ್ದಳು. ಘಟನೆಗೂ ಮೂರು ತಿಂಗಳ ಹಿಂದೆ ಸೈಬರ್ ಪೊಲೀಸ್ ಠಾಣೆಗೆ ಹೋಗಬೇಕು ಎಂದು ನಿರ್ಧಾರ ಮಾಡಿದ್ವಿ. ಆದರೆ ಮೀಡಿಯಾದಲ್ಲಿ ಬರುತ್ತೆ ಅಂತಾ ಭಯದಿಂದ ಸುಮ್ಮನಾದ್ವಿ. ಪವಿತ್ರಗೌಡಗೆ ತುಂಬಾ ಜನ ಕೆಟ್ಟದಾಗಿ ಮಸೇಜ್ ಮಾಡ್ತಿದ್ರು, ನಾನು ತುಂಬಾ ಸಲ ಧೈರ್ಯ ತುಂಬಿದ್ದೆ. ಆಕೆ ಕಿಡ್ನ್ಯಾಪ್ ಮಾಡಿಸಿದ್ದಾಳೆ ಅನ್ನೋದನ್ನ ನಾನು ನಂಬಲ್ಲ ಎಂದಿದ್ದಾರೆ.
ಜೈಲಿನಿಂದ ಬಂದ ಮೇಲೆ ಪವಿತ್ರಾಳನ್ನು ಭೇಟಿಯಾಗಿಲ್ಲ. ದರ್ಶನ್ ಮತ್ತು ಪವಿತ್ರಗೌಡ ನಡುವೆ ನಾನು ಸೇತುವೆಯಂತೆ ಇದ್ದೇನೆ ಎನ್ನುವುದು ಸುಳ್ಳು. ಇನ್ನೂ ದರ್ಶನ್ ಬಗ್ಗೆ ಒಂದು ದಿನವೂ ನಾನು ಕೇಳಿಲ್ಲ. ಬೇರೆ ಯಾವುದೇ ಚರ್ಚೆ ಆಗಿಲ್ಲ. ಪವಿತ್ರಗೌಡ ಮತ್ತೆ ದರ್ಶನ್ ಒಂದಾಗ್ತಾರಾ ಎನ್ನುವ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಏನಿದು ಪ್ರಕರಣ?
ಶ್ವೇತಾ ನವರತ್ನ ಜ್ಯುವೆಲರ್ಸ್‌ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು.
ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಿದ್ದರು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.