ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಿಂದ ಇಂದು (ಡಿ.17) ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಜಾಮೀನು – ಶೀಘ್ರವೇ ಸುಪ್ರೀಂನಲ್ಲಿ ಮೇಲ್ಮನವಿ
Advertisement
ಪವಿತ್ರಾಗೆ (Pavithra Gowda) ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಆ ದೇವರು ನನ್ನ ಮಾತು ಕೇಳಿದರು. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲಿಂದಲೂ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಇನೋಸೆಂಟ್ ಆಕೆ ತಪ್ಪು ಮಾಡಿಲ್ಲ. ಆಕೆ ಬಹಳ ಮಹತ್ವಾಕಾಂಕ್ಷೆ ಇರುವವಳು ಎಂದಿದ್ದಾರೆ.
Advertisement
Advertisement
ಪವಿತ್ರಾಗೆ ಜಾಮೀನು ಸಿಕ್ಕಿರೋದು ಮೊದಲು ಗೊತ್ತಿರಲಿಲ್ಲ. ಈಗ ನಾನು ಬೆಂಗಳೂರಿಗೆ ಟ್ರಿಪ್‌ಗೆ ಬಂದಿದ್ದೆ, ನನ್ನ ವೈಯಕ್ತಿಕ ಕೆಲಸ ಇತ್ತು ಹಾಗಾಗಿ ಬಂದಿದ್ದೇನೆ. ಅವರಿಗೆ ಬೇಲ್ ಸಿಕ್ಕ ವಿಚಾರ ನನ್ನ ಸ್ನೇಹಿತರೊಬ್ಬರು ತಿಳಿಸಿದರು. ಈ 6 ತಿಂಗಳ ಹಿಂದೆ ಒಂದ್ಸಲ ನಮ್ಮ ಮಾವನಿಗೆ ಫೋನ್ ಮಾಡಿದ್ದೆ, ಪವಿತ್ರಾ ಬಗ್ಗೆ ವಿಚಾರಿಸಿದೆ. ಈಗಲೂ ಪವಿತ್ರಾಗಾಗಿ ಕಾಯುತ್ತಿದ್ದೇನೆ. ಮುಂದೆಯೂ ಕಾಯುತ್ತೇನೆ ಎಂದು ಮಾಜಿ ಪತಿ ಸಂಜಯ್ ಸಿಂಗ್ ಮಾತನಾಡಿದ್ದಾರೆ.