ಮತ್ತೊಂದು ವೀಕೆಂಡ್ ಬಂದಿದೆ. ಅದಕ್ಕೂ ಮೊದಲು ಮತ್ತೊಬ್ಬ ಕಂಟೆಸ್ಟೆಂಟ್ ಜೈಲು ಪಾಲಾಗಿದ್ದಾರೆ. ಹೌದು, ಬಿಗ್ ಬಾಸ್ (Bigg Boss Kannada) ಮನೆಯ ಹಾಪ್ ಸೆಂಚುರಿ ಮುಗಿಯುತ್ತಿದ್ದಂತೆ ಪವಿ (Pavi Poovappa)- ಅವಿನಾಶ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮನೆಗೆ ಬಂದು 20 ದಿನಕ್ಕೆ ಕಳಪೆ ಎಂದು ಜೈಲಿಗೆ (Jail) ಸೇರಿದ್ದಾರೆ ಪವಿ ಪೂವಪ್ಪ.
Advertisement
ಕಳೆದ ವಾರ ಆಟ ಸಾಕಷ್ಟು ಟ್ವಿಸ್ಟ್ & ಟರ್ನ್ ಪಡೆದು ಮುನ್ನುಗ್ಗತ್ತಿತ್ತು. ಸಂಗೀತಾ- ಡ್ರೋನ್ ಮುಂದೆ ಮಾನವೀಯತೆ ಇಲ್ಲದೆ ಆಟವಾಡಿದ ವಿನಯ್ & ಟೀಮ್ ವಿರುದ್ಧ ಫ್ಯಾನ್ಸ್ ಗುಡುಗಿದ್ದರು. ಈ ಪರಿಣಾಮ ಸಂಗೀತಾ- ಪ್ರತಾಪ್ ಕಣ್ಣೀಗೆ ಪೆಟ್ಟು ಆಗುವ ಹಾಗೇ ಆಯ್ತು.
Advertisement
Advertisement
ಬಳಿಕ ಈ ವಾರ ಬಿಗ್ ಬಾಸ್ ಮನೆನೇ ಸ್ಕೂಲ್ ಆಗಿ ಬದಲಾಗಿತ್ತು. ಸ್ಪರ್ಧಿಗಳೆಲ್ಲಾ ಮಕ್ಕಳಾಗಿ, ಪ್ರಾಧ್ಯಾಪಕರಾಗಿ ಬದಲಾದರು. ಈ ವೇಳೆ, ಪವಿ ಯೋಗ ಟೀಚರ್ ಆಗಿದ್ದರು. ಆದರೆ ಯೋಗ ಟೀಚರ್ ಆಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನಗೆಲ್ಲೋದ್ರಲ್ಲಿ ಯಡವಿದ್ದರು ಪವಿ.
Advertisement
ಇದನ್ನೇ ಕಾರಣವಿಟ್ಟುಕೊಂಡು ಮನೆ ಮಂದಿಯೆಲ್ಲಾ ಪವಿಗೆ ಕಳಪೆ ಹಣೆಪಟ್ಟಿ ಕೊಟ್ಟು ಜೈಲಿಗೆ ಅಟ್ಟಿದ್ದಾರೆ. ಇನ್ನೂ ತುಕಾಲಿ ಸಂತೂ ಈ ವಾರ ಇಂಗ್ಲೀಷ್ ಟೀಚರ್ ಆಗಿ ಮತ್ತು ಶಿಕ್ಷಕರಾಗಿ ಎರಡರಲ್ಲೂ ಮನಗೆದ್ದಿದ್ದಾರೆ. ಅಷ್ಟರಮಟ್ಟಿಗೆ ತುಕಾಲಿ ಕಾಮಿಡಿ ಪಂಚ್ ಎಲ್ಲರಿಗೂ ಕಿಕ್ ಕೊಟ್ಟಿತ್ತು. ಈ ನಡೆ ನೋಡಿಯೇ ಮನೆಮಂದಿ ತುಕಾಲಿ ಉತ್ತಮ ಎಂದು ಹಣೆಪಟ್ಟಿ ಕೊಟ್ಟಿದ್ದಾರೆ.
ಸ್ನೇಹಿತ್ ಎಲಿಮಿನೇಷನ್ ನಂತರ ಈ ವಾರ ಯಾರಿಗೆ ಆಟ ಕೊನೆಗೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ. ಮೈಕಲ್, ಸಿರಿ, ವಿನಯ್, ಪವಿ, ಸಂಗೀತಾ, ಡ್ರೋನ್ ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದು ಕೌತುಕ ಮೂಡಿಸಿದೆ.