ಅಂಡರ್ 19 ಟೆಸ್ಟ್ – ದ್ವಿಶತಕ ಸಿಡಿಸಿ ದಾಖಲೆ ಬರೆದ ಪವನ್ ಶಾ

Public TV
1 Min Read
Pavan Shah

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೀಂ ಇಂಡಿಯಾ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಪವನ್ ಶಾ ಅಕರ್ಷಕ 282 ರನ್ ಸಿಡಿಸಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಶ್ರೀಲಂಕಾ ವಿರುದ್ಧ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪವನ್ ಶಾ 282 ರನ್(332 ಎಸೆತ, 33 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್ ನ ಅಂಡರ್ 19 ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಈ ಪಟ್ಟಿಯಲ್ಲಿ ಆಸೀಸ್ ಆಟಗಾರ ಸಿ ಪೀಕೆ ಮೊದಲ ಸ್ಥಾನದಲ್ಲಿ ಇದ್ದು, ಭಾರತದ ವಿರುದ್ಧವೇ ಪೀಕೆ ಅಜೇಯ 304 ರನ್ ಗಳಿಸಿದ್ದರು. ಇನ್ನು ಟೀಂ ಇಂಡಿಯಾ ಪರ ಗೌತಮ್ ಗಂಭೀರ್ (212), ಚೇತೇಶ್ವರ ಪೂಜಾರ ಮತ್ತು ಅಭಿನವ್ ಮುಕುಂದ್ (205ರನ್) ದ್ವಿಶತಕ ಸಿಡಿಸಿದ ಪ್ರಮುಖ ಆಟಗಾರರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಪವನ್ ಶಾ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಾಗಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದ ಅಥರ್ವ 177ರನ್ (172 ಎಸೆತ, 20 ಬೌಂಡರಿ, 3 ಸಿಕ್ಸರ್) ಹೊಡೆದರು. ಇವರಿಬ್ಬರ ಅಮೋಘ ಆಟದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ ಬರೋಬ್ಬರಿ 613 ರನ್ ಗಳಿಸಿದೆ.

ಅಂಡರ್ 19 ಟೆಸ್ಟ್ ದ್ವಿಶತಕ :
ಪವನ್ ಶಾ – 282 ರನ್ (2018)
ಶ್ರೀವಾಸ್ತವಾ – 220 ರನ್ (2007)
ಗೌತಮ್ ಗಂಭೀರ್ – 212 ರನ್ (2001)
ಚೇತೇಶ್ವರ ಪೂಜಾರ – 21 ರನ್ (2005)
ಅಭಿನವ್ ಮುಕುಂದ್ – 205 ರನ್ (2007)
ವಿನಾಯಕ್ ಮಾನೆ – 201 ರನ್ (2001)

Share This Article
Leave a Comment

Leave a Reply

Your email address will not be published. Required fields are marked *