ಪಾಟ್ನಾ: ಒಂಬತ್ತು ತಿಂಗಳಿನಿಂದ ನಿರಂತರವಾಗಿ ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಾಚಾರ್ಯನೊಬ್ಬನನ್ನು ಬಿಹಾರದ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ.
ಪಾಟ್ನಾದ ಫುಲ್ವಾರಿ ಶರೀಫ್ ನಗರ ಖಾಸಗಿ ಶಾಲೆಯೊಂದರ ಪ್ರಾಚಾರ್ಯ ಇಂತಹ ಅಮಾನವೀಯ ಕೃತ್ಯ ಎಸಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಲೆಯ ಕ್ಲರ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ನಡೆದದ್ದು ಏನು?
ಬುಧವಾರ ಶಾಲೆಯಿಂದ ಬಂದ ಬಾಲಕಿ ವಾಂತಿ ಮಾಡಿಕೊಂಡಿದ್ದಾಳೆ. ಅಸ್ವಸ್ಥವಾಗಿದ್ದ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಬಾಲಕಿಯನ್ನು ವಿಚಾರಿಸಿದಾಗ ಪ್ರಾಚಾರ್ಯ ಅತ್ಯಾಚಾರ ಎಸಗಿರುವುದು ಬೆಳಕಿದೆ ಬಂದಿದೆ.
Advertisement
ನಿನ್ನ ಪುಸ್ತಕ ನೋಡಬೇಕು ತಗೆದುಕೊಂಡು ಆಫೀಸ್‍ಗೆ ಬಾ ಅಂತ ಪ್ರಾಚಾರ್ಯರು ಹೇಳಿದ್ದರು. ನಾನು ಆಫೀಸ್‍ಗೆ ಹೋದಾಗ ಹೆದರಿಸಿ, ನನ್ನ ಮೇಲೆ ಮೊದಲ ಬಾರಿಗೆ ಪ್ರಾಚಾರ್ಯ ಅತ್ಯಾಚಾರ ಎಸಗಿದ್ದ. ಜೊತೆಗೆ ಪ್ರಾಚಾರ್ಯನ ಈ ಕೃತ್ಯವನ್ನು ಶಾಲೆಯ ಕ್ಲರ್ಕ್ ವಿಡಿಯೋ ಮಾಡಿದ್ದ ಎಂದು ಸಂತ್ರಸ್ತ ಬಾಲಕಿ ಮಾಹಿತಿ ನೀಡಿದ್ದಾಳೆ.
Advertisement
Advertisement
ಕಳೆದ ಒಂಬತ್ತು ತಿಂಗಳಿನಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಕ್ಲಾರ್ಕ್ ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ ಚಾಕು ತೊರಿಸಿ ಬಲವಂತವಾಗಿ ಆಫೀಸ್ ರೂಮ್‍ಗೆ ಕರೆಸಿಕೊಂಡು ಪ್ರಾಚಾರ್ಯ ಅತ್ಯಾಚಾರ ಎಸಗುತ್ತಿದ್ದ ಎಂದು ವಿವರಿಸಿದ್ದಾಳೆ.
ಬಾಲಕಿಯನ್ನು ಅತ್ಯಾಚಾರ ಮಾಡಲು ಆಫೀಸ್‍ನಲ್ಲಿಯೇ ಪ್ರತ್ಯೇಕ ರೂಮ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಪ್ರಾಚಾರ್ಯ ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕಿ ಹಾಗೂ ಪೋಷಕರ ಹೇಳಿಕೆಯ ಅನ್ವಯ ಫುಲ್ವಾರಿ ಶರೀಫ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆರೋಪಿಗಳಾದ ಪ್ರಾಚಾರ್ಯ ಹಾಗೂ ಕ್ಲರ್ಕ್ ನನ್ನು ಬಂಧಿಸಿ, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv