ಮಹಾ ಎಡವಟ್ಟು; ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ – ತಬ್ಬಿಬ್ಬಾದ ಜನ!

Public TV
2 Min Read
Patna Railway Station 3

ಪಾಟ್ನಾ:‌ ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ಮಾಹಿತಿ ಪ್ರಸಾರ ಮಾಡುವ ಉದ್ದೇಶದಿಂದ ಟಿವಿ‌ ಸ್ಕ್ರೀನ್‌ಗಳನ್ನ ಅಳವಡಿಸಿರುತ್ತಾರೆ. ಹಾಗೆಯೇ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ (Patna Railway Station) ಪ್ರಯಾಣಿಕರಿಗೆ ರೈಲು ಸಂಚಾರದ ಮಾಹಿತಿ ನೀಡುವ ಉದ್ದೇಶದಿಂದ ಹಾಕಿದ್ದ ಟಿವಿ ಪರದೆಯ (TV Screens) ಮೇಲೆ ʻನೀಲಿ ಚಿತ್ರʼ ಪ್ರಸಾರವಾಗಿರುವುದು ಕಂಡುಬಂದಿದೆ.

ಸುಮಾರು 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ರೈಲ್ವೆ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿದೆ. ಕೆಲವರು ಇದನ್ನು ವೀಡಿಯೋ ಮಾಡಿಕೊಂಡಿದ್ದು, ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

Patna Railway Station 1 1

ಏನಿದು ಘಟನೆ?
ರೈಲ್ವೆ ಇಲಾಖೆಯು ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಟಿವಿಗಳ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದೆ. ಈ ಸಂಸ್ಥೆಯ ಸಿಬ್ಬಂದಿ ಎಡವಟ್ಟಿನಿಂದ ನೀಲಿ ಚಿತ್ರ ಪ್ರದರ್ಶನವಾಗಿದೆ. ಭಾನುವಾರ ಸಂಜೆ ಜನನಿಬಿಡವಾಗಿದ್ದ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್‌ ನಂಬರ್ 10ರಲ್ಲಿ ಬ್ಲೂ ಫಿಲ್ಮ್ ಪ್ರಸಾರ ಆಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸ್ ಅಧಿಕಾರಿಗಳು (RPF) ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ಇಷ್ಟಾಗುವ ವೇಳೆಗೆ 3 ನಿಮಿಷಗಳ ಕಾಲ ಪ್ಲೇ ಆದ ಪೋರ್ನ್ ವೀಡಿಯೋ ನಂತರ ಬಂದ್ ಆಯಿತು. ಬಳಿಕ ಎಂದಿನಂತೆ ರೈಲುಗಳ ಆಗಮನ, ನಿರ್ಗಮನ ಮಾಹಿತಿ ಪ್ರಸಾರವಾಯಿತು. ಇದನ್ನೂ ಓದಿ: ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

Patna Railway Station 2

ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು, ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಖಾಸಗಿ ಏಜೆನ್ಸಿಯ ಹಲವರನ್ನು ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಇದ್ದ ಟಿವಿ ಆಪರೇಟರ್‌ಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *