– ನಡುರೋಡಲ್ಲಿ ರೋಗಿಗಳ ಶಿಫ್ಟಿಂಗ್
– ಪಬ್ಲಿಕ್ ಟಿವಿಯಲ್ಲಿ 108 ಆಂಬ್ಯುಲೆನ್ಸ್ ಕರ್ಮಕಾಂಡ
* ರಕ್ಷಾ ಕಟ್ಟೆಬೆಳಗುಳಿ
ಬೆಂಗಳೂರು: ಪ್ರಾಣ ರಕ್ಷಣೆಗಾಗಿ ಮೀಸಲಿರೋ 108 ಅಂಬುಲೆನ್ಸ್‍ಗಳು ಪ್ರಾಣ ಭಕ್ಷಕನ ರೀತಿ ಕೆಲಸ ಮಾಡ್ತಾ ಇವೆ. ಸರ್ಕಾರಕ್ಕೆ ಹೆಚ್ಚೆಚ್ಚು ಟ್ರಿಪ್‍ಗಳನ್ನು ತೋರಿಸೋ ನಿಟ್ಟಿನಲ್ಲಿ ರಸ್ತೆ ಮಧ್ಯದಲ್ಲೇ ರೋಗಿಗಳ ಶಿಫ್ಟಿಂಗ್ ನಡೆಯುತ್ತಿದೆ.
Advertisement
Advertisement
ಹೌದು. ಜನರ ಜೀವ ರಕ್ಷಣೆಕಾಗಿ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸೋ 108 ಆಂಬ್ಯುಲೆನ್ಸ್ ಗಳಲ್ಲಿ ಇತ್ತೀಚೆಗೆ ಶುರುವಾಗಿರೋ ಮತ್ತೊಂದು ಕರ್ಮಕಾಂಡ ಇದು. ರಾಜ್ಯದಲ್ಲಿ ಒಟ್ಟು 717 108 ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ವಾಹನಗಳ ಮೇಲುಸ್ತುವಾರಿ ವಹಿಸಿರೋ ಜಿವಿಕೆ ಸಂಸ್ಥೆ ಸರ್ಕಾರಕ್ಕೆ ಹೆಚ್ಚು ಶೆಡ್ಯೂಲ್‍ಗಳನ್ನು ತೋರಿಸೋಕೆ ಒಂದು ಪೇಷೆಂಟ್‍ನ ಎರಡು 108 ಆಂಬ್ಯುಲೆನ್ಸ್ ಆಸ್ಪತ್ರೆಗೆ ಸಾಗಿಸೋ ಕೆಲಸ ಮಾಡ್ತಿದ್ದು, ರೋಗಿಗಳ ಜೀವದೊಂದಿಗೆ ಆಟವಾಡ್ತಿದ್ದಾರೆ. ಇತ್ತ ಇದೇ ಶಿಫ್ಟಿಂಗ್ ವಿಚಾರದಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಸ್ಥಳೀಯರಿಂದ ಥಳಿತಕೊಳಗಾದ ಘಟನೆಗೆಳು ಸಹ ನಡೆದಿವೆ.
Advertisement
Advertisement
ಶವ ಸಾಗಿಸೋಕ್ಕೆ ತಯಾರಿ: ಈಗಾಗ್ಲೇ 717, 108 ಆಂಬ್ಯುಲೆನ್ಸ್ ಗಳನ್ನು ಮೇಲುಸ್ತುವಾರಿ ಹೊತ್ತಿರೋ ಪರರಾಜ್ಯದ ಜಿವಿಕೆ, ಭ್ರಷ್ಟಾಚಾರ, ಹಾಗೂ ರೊಗಿಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಹೆಸರಾಗಿರೋ ಜೆವಿಕೆಗೆ ರಾಜ್ಯದ ತಾಲೂಕು ಆಸ್ಪತ್ರೆಗಳ 800 ಆಂಬ್ಯುಲೆನ್ಸ್ ಗಳು ಹಾಗೂ ಮುಕ್ತಿ ವಾಹನದ ಉಸ್ತುವಾರಿಯನ್ನು ನೀಡೋಕೆ ಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ ಶವವನ್ನು ಸಹ 108 ಆಂಬ್ಯುಲೆನ್ಸ್ ಗಳಲ್ಲಿ ಸಾಗಿಸುವಂತೆ ಸೂಚನೆ ನೀಡಿದ್ದಾರಂತೆ.
108 ಆಂಬ್ಯುಲೆನ್ಸ್ ನಲ್ಲಿ ಜಿವಿಕೆ ನಡೆಸುತ್ತಿರೋ ಕರ್ಮಕಾಂಡ ಇಷ್ಟಕ್ಕೆ ಮುಗಿಯೋದಿಲ್ಲ, ದುರಸ್ಥಿತಿಯಲ್ಲಿರೋ, ವಾಹನಗಳ ಬಗ್ಗೆ ಕಂಪ್ಲೇಟ್ ಮಾಡಿದ್ರೂ ಕೇಳೋರಿಲ್ಲ. ಕೆಲವೊಂದು ಬಾರಿ 108 ಆಂಬ್ಯುಲೆನ್ಸ್‍ಗಳಲ್ಲಿ ರೋಗಿಗಳಿದ್ದಾಗ ಕೆಟ್ಟು ನಿಂತು ಪರದಾಡೋ ಪರಿಸ್ಥಿತಿ ಸಿಬ್ಬಂದಿಯದ್ದು.