– ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಆಸ್ಪತ್ರೆ
ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಸತತ 7 ಗಂಟೆಗಳ ಕಾಲ ಅಡ್ಮಿಟ್ ಮಾಡಿಕೊಳ್ಳದೆ ಅಂಬುಲೆನ್ಸ್‌ನಲ್ಲಿಯೇ ಬಿಟ್ಟು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ತಕ್ಷಣ ಎಚ್ಚತ್ತ ವೈದ್ಯರು, ಗಾಯಾಳು ಶ್ರೀನಿವಾಸ್‍ನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಂಡಿದ್ದಾರೆ. ಮಧ್ಯಾಹ್ನದಿಂದ ಇಲ್ಲದ ಬೆಡ್ ದಿಢೀರ್ ಅಂತ ಹೇಗೆ ಬಂತು ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಬಾಣಂತಿಯರಿಗೆ ನರಕ ದರ್ಶನ – ಬೆಡ್‍ಗಳಿಲ್ಲದೆ ನೆಲದ ಮೇಲೆಯೇ ನರಳಾಟ
ಜೀವ ಕೈಯಲ್ಲಿ ಇಟ್ಟುಕೊಂಡು ಚಿಕಿತ್ಸೆಗಾಗಿ ದೂರದ ಊರುಗಳಿಂದ ಬಂದ ರೋಗಿಗಳಿಗೆ ಈ ರೀತಿ ಕನಿಷ್ಠ ಚಿಕಿತ್ಸೆಯೂ ಸಿಗದೇ ಅಂಬುಲೆನ್ಸ್‌ನಲ್ಲೇ ಬಿಡೋದು ಎಷ್ಟು ಸರಿ? ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಈ ನಿರ್ಲಕ್ಷ್ಯ ದ ಬಗ್ಗೆ ಆರೋಗ್ಯ ಸಚಿವರು ಉತ್ತರ ನೀಡಬೇಕಿದೆ.


