ಬೆಂಗಳೂರು: ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಜನರ ರಕ್ತ ಹೀರಲು ಶುರು ಮಾಡಿವೆ.
ಕಾವಲ ಭೈರಸಂದ್ರದಲ್ಲಿರುವ ಮಂಜುಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುರಳಿ ಅನ್ನೋರು ಟ್ರೀಟ್ಮೆಂಟ್ಗೆ ತೆರಳಿದ್ರು. ವೈದ್ಯ ರವಿ ನಾಯಕ್ ಟ್ರಿಟ್ಮೆಂಟ್ ಶುರು ಮಾಡಿ, ಪ್ಲೇಟ್ಲೆಟ್ಸ್ ಕಡಿಮೆ ಇದೆ. ಡೆಂಗ್ಯೂ ಇರಬಹುದು ಅಂತಾ ಅಡ್ಮಿಟ್ ಮಾಡ್ಕೊಂಡಿದ್ದಾರೆ. ಜ್ವರ ನಿಂತು ಹೋಗಿ ನಾರ್ಮಲ್ ಆದ್ರೂ ಪ್ಲೇಟ್ಲೆಟ್ಸ್ 1 ಲಕ್ಷದ 30 ಸಾವಿರ ಇದೆ ಅಂತಾ ಹೇಳಿದ್ದಾರೆ.
Advertisement
ಇದರಿಂದ ಅನುಮಾನಗೊಂಡ ಮುರಳಿ ಪಕ್ಕದಲ್ಲೆ ಇದ್ದ ಆಸ್ಪತ್ರೆಗಳಿಗೆ ಹೋಗಿ ಪ್ಲೇಟ್ಲೆಟ್ಸ್ ಟೆಸ್ಟ್ ಮಾಡಿಸಿದ್ದಾರೆ. ಅಲ್ಲಿ 1 ಲಕ್ಷದ 80 ಸಾವಿರ ಪ್ಲೇಟ್ಲೆಟ್ಸ್ ಇದೆ ಅಂತಾ ರಿಪೋರ್ಟ್ ಕೊಟ್ಟಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ನಮ್ಮ ಯಂತ್ರದಲ್ಲಿ ಪ್ರಾಬ್ಲಂ ಆಗಿದೆ. ಬಿಲ್ ಕಟ್ಟಿ ಅಂತಾ ಮಂಜುಶ್ರೀ ಆಸ್ಪತ್ರೆಯವರು ಯರ್ರಾಬಿರ್ರಿ ಬಿಲ್ ಕೊಟ್ಟಿದ್ದಾರೆ.
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ವೈದ್ಯ ರವಿ ನಾಯಕ್ ಅವರನ್ನು ಕೇಳಿದ್ದಕ್ಕೆ ನಿಮ್ಮನ್ನ ಯಾರು ಒಳಗೆ ಬಿಟ್ಟಿದ್ದು ಅಂತಾ ಕಿಡಿಕಾರಿದ್ದಾರೆ.