– ವಿಶ್ವದ ಟಾಪ್ -10 ದಿಗ್ಗಜರ ಪಟ್ಟಿಗೆ ನಿಸ್ಸಾಂಕ ಲಗ್ಗೆ
– ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ (Pathum Nissanka) ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ದ್ವಿಶತಕ (ODI Double Century) ಸಿಡಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಶ್ರೀಲಂಕಾದ ಕ್ರಿಕೆಟ್ ಇತಿಹಾಸದಲ್ಲೇ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳುವ ಜೊತೆಗೆ 24 ವರ್ಷಗಳಿಂದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ. ಜೊತೆಗೆ ದ್ವಿಶತಕ ಸಿಡಿಸಿದ ವಿಶ್ವದ ಟಾಪ್-10 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಸನತ್ ಜಯಸೂರ್ಯ (Sanath Jayasuriya) ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ 189 ರನ್ ಗಳಿಸಿದ್ದರು. ಇದು ಶ್ರೀಲಂಕಾ ಬ್ಯಾಟರ್‌ಗಳ ಪೈಕಿ ಏಕದಿನ ಕ್ರಿಕೆಟ್‌ನಲ್ಲಿ ಆಟಗಾರರೊಬ್ಬರು ಗಳಿಸಿದ್ದ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನೂ ಓದಿ: ಭಾರತದ ವಿರುದ್ಧ T20I ಸಮರಕ್ಕಿಳಿದ ಜಿಂಬಾಬ್ವೆ – ಜುಲೈ 6 ರಿಂದ 5 ಪಂದ್ಯಗಳ ಸರಣಿ
Advertisement
Advertisement
ದ್ವಿಶತಕ ಸಿಡಿಸಿದ ಲಂಕಾದ ಮೊದಲ ಬ್ಯಾಟರ್:
ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೇವಲ 3 ವಿಕೆಟ್ ನಷ್ಟಕ್ಕೆ 50 ಓವರ್‌ಗಳಲ್ಲಿ 381 ರನ್ ಗಳಿಸಿತು. ಪಲ್ಲೆಕೆಲೆಯಲ್ಲಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಲಂಕಾ ಪರ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ ಅಜೇಯ ದ್ವಿಶತಕ ಸಿಡಿಸುವ ಮೂಲಕ ದಿಗ್ಗಜರ ಎಲೈಟ್ ಪಟ್ಟಿ ಸೇರಿಕೊಂಡರು. 136 ಎಸೆತಗಳಲ್ಲಿ 200 ರನ್ (19 ಬೌಂಡರಿ, 7 ಸಿಕ್ಸರ್) ಬಾರಿಸಿದ ನಿಸ್ಸಾಂಕ, ಒಟ್ಟಾರೆ ಎದುರಿಸಿದ 139 ಎಸೆತಗಳಲ್ಲಿ ಅಜೇಯ 210 ರನ್ ಬಾರಿಸಿ ವಿಶೇಷ ಸಾಧನೆ ಮಾಡಿದರು. ಇದರಲ್ಲಿ 20 ಬೌಂಡರಿಗಳು ಹಾಗೂ 8 ಸಿಕ್ಸರ್‌ಗಳೂ ಸೇರಿವೆ. ಇದನ್ನೂ ಓದಿ: U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್ ಎದುರಾಳಿ – ಫೆ.11ರಂದು ಫೈನಲ್
Advertisement
Advertisement
ದಿಗ್ಗಜರ ಎಲೈಟ್ ಪಟ್ಟಿಗೆ ನಿಸ್ಸಾಂಕ ಲಗ್ಗೆ:
ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಆಟಗಾರರ ಪೈಕಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 264 ರನ್ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಈವರೆಗೂ ಅಗ್ರಸ್ಥಾನದಲ್ಲಿದ್ದಾರೆ. ಇದರೊಂದಿಗೆ ಮಾರ್ಟಿನ್ ಗಪ್ಟಿಲ್ (237 ರನ್), ವೀರೇಂದ್ರ ಸೆಹ್ವಾಗ್ (219 ರನ್), ಕ್ರಿಸ್‌ಗೇಲ್ (215 ರನ್), ಫಖರ್ ಝಮಾನ್ (210 ರನ್) ಮೊದಲ ಐದು ಸ್ಥಾನಗಳಲ್ಲಿದ್ದರೆ, ಪಾಥುಮ್ ನಿಸ್ಸಾಂಕ ಅಜೇಯ 210 ರನ್ ಗಳಿಸುವ ಮೂಲಕ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ನಂತರದಲ್ಲಿ ಇಶಾನ್ ಕಿಶನ್ (210 ರನ್), ರೋಹಿತ್ ಶರ್ಮಾ (209, ಮತ್ತೊಮ್ಮೆ 208 ರನ್), ಶುಭಮನ್ ಗಿಲ್ (208 ರನ್), ಗ್ಲೇನ್ ಮ್ಯಾಕ್ಸ್‌ವೆಲ್ (201 ರನ್), ಸಚಿನ್ ತೆಂಡೂಲ್ಕರ್ (200 ರನ್) ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ರೋಹಿತ್ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್ ವಾರ್ನಿಂಗ್!