ಬೆಂಗಳೂರು: ಕಾರಿನ ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿದೆ. ಹೀಗಾಗಿ ಕಾರನ್ನು ಬದಲಾಯಿಸಿ ಕೊಡುವಂತೆ ಗ್ರಾಹಕರೊಬ್ಬರು ಮಲ್ಲೇಶ್ವರಂದ ವರುಣ್ ಮೋಟರ್ಸ್ ಶೋರೂಂ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಏಪ್ರಿಲ್ 17 ರಂದು ನಾಗರಬಾವಿ ನಿವಾಸಿ ನಾಗರಾಜ್ ಅವರು ವರುಣ್ ಮೋಟರ್ಸ್ ಶೋ ರೂಂನಲ್ಲಿ ವಿಟರಾ ಬ್ರೆಜಾ ಕಾರನ್ನು ಖರೀದಿಸಿದ್ದರು. ಸುಮಾರು ದಿನಗಳಿಂದ ಎಂಜಿನ್ ನಿಂದ ಇಂಧನ ಸೋರಿಕೆ ಆಗುತ್ತಿದೆ ಅಂತಾ ಪರೀಕ್ಷೆ ಮಾಡಿಸಲು ಶೋರೂಂಗೆ ಹೋಗಿದ್ದರು.
Advertisement
ಈ ವೇಳೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿ ಶೋರೂಂ ಸಿಬ್ಬಂದಿ ಕಾರನ್ನು ಕೊಟ್ಟಿದ್ದಾರೆ.ಆದರೆ ಸಂದೇಹ ವ್ಯಕ್ತವಾಗಿದ್ದರಿಂದ ನಾಗರಾಜ್ ಅವರು ನಾಗದೇವನಹಳ್ಳಿಯ ಕಲ್ಯಾಣಿ ಮೋಟಾರ್ಸ್ಗೆ ಹೋಗಿ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಪರೀಕ್ಷಿಸಿದ ಕಲ್ಯಾಣಿ ಮೋಟಾರ್ಸ್ ಅವರು ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿರುವುದನ್ನು ದೃಢಪಡಿಸಿದ್ದರು.
Advertisement
Advertisement
ನಾಗರಾಜ್ ಅವರು ವರುಣ್ ಮೋಟಾರ್ಸ್ ಮರಳಿ ಬಂದು, ರಿಪೇರಿ ಮಾಡಿಸಿಕೊಂಡು ಹೋಗಿದ್ದರು. ಆದರೆ, ರೀಪೆರಿ ಆಗಿ ಮೂರು ದಿನಕ್ಕೆ ಮತ್ತೇ ಅದೇ ಸಮಸ್ಯೆ ಉಂಟಾಗಿದ್ದರಿಂದ ವರುಣ್ ಮೋಟಾರ್ಸ್ ಅವರಿಗೆ ಸುಮಾರು 70 ರಿಂದ 80 ಇಮೇಲ್ ಕಳಿಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೇ ಶೋರೂಂ ಸಿಬ್ಬಂದಿ ಸತಾಯಿಸಿದ್ದರು. ಇದರಿಂದ ಕೋಪಗೊಂಡ ನಾಗರಾಜ್ ಅವರು ಶೋರೂಂ ಎದುರು ಕಾರು ನಿಲ್ಲಿಸಿ, ಕಾರನ್ನು ಬದಲಾಯಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.