‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್

Public TV
2 Min Read
FotoJet 79

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿನೇಷನ್ ನ ‘ಪಠಾಣ್’ ಸಿನಿಮಾದ ಮತ್ತೊಂದು ಹಾಡು ಇಂದು ಬಿಡುಗಡೆ ಆಗಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಹಾಡಿನ ಒಂದೇ ಒಂದು ಫೋಟೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ ಹಾಗಾಗಿ ಶಾರುಖ್ ಮತ್ತು ದೀಪಿಕಾ ಪಡುಕೋಣೆಗೆ ಡ್ಯಾನ್ಸ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

FotoJet 1 70

ಪಠಾಣ್ ಸಿನಿಮಾದ ಎರಡನೇ ಹಾಡು ಇದಾಗಿದ್ದು ‘ಜೂಮೇ ಜೋ ಪಠಾಣ್’ ಹೆಸರಿನ ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲ ಮೊನ್ನೆಯಷ್ಟೇ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಹಾಕಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

FotoJet 2 67

ಎರಡನೇ ಹಾಡು ಬಿಡುಗಡೆಯ ಬೆನ್ನಲ್ಲೇ ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಇದೆ. ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಈ ಮಾಹಿತಿಯನ್ನು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಏನೇ ವಿವಾದ ಮಾಡಿದರೂ, ಅವರ ಜನಪ್ರಿಯತೆ ಯಾವತ್ತೂ ಕಡಿಮೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

FotoJet 74

ವಿವಾದದ ಕುರಿತು ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು. ನೀವು ಏನೇ ಬಾಯ್ಕಾಟ್ ಮಾಡಿರಿ, ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದರು. ಶಾರುಖ್ ಏನೇ ಹೇಳಿದರೂ, ವಿವಾದದ ಉರಿ ಇನ್ನೂ ತಣ್ಣಗಾಗಲಿಲ್ಲ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಈ ವಿವಾದಲ್ಲಿ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿವಾದ ದೊಡ್ಡದಾಗಿದೆ.

Live Tv
[brid partner=56869869 player=32851 video=960834 autoplay=true]

Share This Article