ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕ್ರೇಜ್ ಬರೀ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈವರೆಗೂ ಏಳುನೂರು ಕೋಟಿ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಅಲ್ಲಿ ಚಿತ್ರ ಬಿಡುಗಡೆ ಆಗದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ನಿರಾಸೆಯಾಗಿದ್ದರು.
Advertisement
ಅಭಿಮಾನಿಗಳ ತುಡಿತವನ್ನು ಗಮನಿಸಿದ್ದ ಕರಾಚಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಪಠಾಣ್ ಸಿನಿಮಾದ ಪ್ರದರ್ಶನಕ್ಕೆ ಮುಂದಾಗಿದ್ದರು. ಆನ್ ಲೈನ್ ನಲ್ಲಿ ಟಿಕೆಟ್ ಒಂದಕ್ಕೆ 900 ರೂಪಾಯಿ ದರ ನಿಗಧಿ ಮಾಡಿ, ಪ್ರದರ್ಶನ ಕೂಡ ನಡೆಸಿದ್ದರು. ಈ ಮಾಹಿತಿ ಅಲ್ಲಿನ ಸೆನ್ಸಾರ್ ಮಂಡಳಿಗೆ ಗೊತ್ತಾಗುತ್ತಿದ್ದಂತೆಯೇ ಪ್ರದರ್ಶನ ನಿಲ್ಲಿಸಿ, ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಆಶಿಕಾ ರಂಗನಾಥ್ಗೆ ಮನಸಾರೆ ಹಾರೈಸಿದ ಜ್ಯೂ.ಎನ್ಟಿಆರ್
Advertisement
Advertisement
ಹೊರ ದೇಶಗಳ ಚಿತ್ರಗಳು ಅಲ್ಲಿನ ಸೆನ್ಸಾರ್ ಮಂಡಳಿ ಮುಂದೆ ಬಾರದೇ ಪ್ರದರ್ಶನ ಆಗುವಂತಿಲ್ಲ. ಅಕ್ರಮವಾಗಿ ಪ್ರದರ್ಶಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಕೂಡ ಇದೆ. ಕೆಲವು ವರ್ಷಗಳಿಂದ ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುತ್ತಿಲ್ಲ. ಅಲ್ಲಿನ ಸೆನ್ಸಾರ್ ಮಂಡಳಿಯು ಭಾರತದ ಚಿತ್ರಗಳಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಇವರ ಕಣ್ಣು ತಪ್ಪಿಸಿ ಪಠಾಣ್ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ.
Advertisement
ಈ ಸಿನಿಮಾ ಬಾಂಗ್ಲಾದೇಶದಲ್ಲೂ ರಿಲೀಸ್ ಆಗದೇ ಇರುವ ಕಾರಣಕ್ಕಾಗಿ, ಅಲ್ಲಿನ ಶಾರುಖ್ ಅಭಿಮಾನಿಗಳು ಭಾರತದ ತ್ರಿಪುರಕ್ಕೆ ಬಂದು ಪಠಾಣ್ ಸಿನಿಮಾ ನೋಡಿಕೊಂಡು ಹೋಗಿದ್ದಾರೆ. ಈ ವಿಷಯವನ್ನು ತ್ರಿಪುರದ ಥಿಯೇಟರ್ ಮಾಲೀಕರೇ ಮಾಹಿತಿಯನ್ನು ಹಂಚಿಕೊಂಡಿದ್ದರು. ಶಾರುಖ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಬಾಂಗ್ಲಾದಿಂದ ಬಂದ ಅಭಿಮಾನಿಗಳ ಆ ಪ್ರೀತಿಯನ್ನು ಅವರು ಪ್ರಶಂಸಿಸಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k