ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಹಾಕಿದ್ದ ವಿವಾದವು ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಹಿಂದೆ ಕೇವಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಯ್ಕಾಟ್ ಮಾತುಗಳನ್ನು ಆಡಿದ್ದರು. ಇದೀಗ ನೇರವಾಗಿ ರಾಜಕೀಯ ವ್ಯಕ್ತಿಗಳೇ ಅಖಾಡಕ್ಕೆ ಇಳಿದು ಪರ ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಈ ಹಿಂದಿನ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ವಿವಾದದಲ್ಲಿ ಸುಖಾಸುಮ್ಮನೆ ಸಚಿವೆಯನ್ನು ಎಳೆತಂದಿದ್ದಾರೆ.
Advertisement
ಬಿಜೆಪಿಯ ಹಲವು ಮುಖಂಡರು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಮತ್ತು ತಂಡವನ್ನು ತರಾಟೆಗೆ ತಗೆದುಕೊಂಡಿದ್ದರು. ತರಾಟೆಗೆ ತಗೆದುಕೊಂಡವರ ಪಕ್ಷದಲ್ಲೇ ಇರುವ ಸ್ಮೃತಿ ಇರಾನಿ 1998ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಅವರು ಆ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ. ಆ ವಿಡಿಯೋ ವೈರಲ್ ಕೂಡ ಆಗಿದೆ.
Advertisement
रंग दे तू मोहे गेरुआ…… pic.twitter.com/KSNmA9wp6h
— ???????????????? ???????????????????? (@DrRijuDutta_TMC) December 16, 2022
Advertisement
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಹಾಡಿನ ಬಗ್ಗೆ ಈವರೆಗೂ ವಿವಾದ ಎದ್ದಿತ್ತು. ಈ ಬಾರಿ ಟೈಟಲ್ ಬಗ್ಗೆಯೂ ಅಪಸ್ವರ ಶುರುವಾಗಿದೆ. ಈ ಟೈಟಲ್ ಇಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಈ ಶೀರ್ಷಿಕೆಯನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement
ಮುಸ್ಲಿಂ ಸಮುದಾಯದಲ್ಲಿ ಪಠಾಣರು ಎಂದರೆ ಗೌರವದಿಂದ ಇರುವವರು ಎಂದರ್ಥ. ಆದರೆ, ಈ ಸಿನಿಮಾದಲ್ಲಿ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿದೆ. ಕೂಡಲೇ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಹಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಈ ಟೈಟಲ್ ಇಟ್ಟುಕೊಂಡು ನಾಯಕಿಗೆ ಬಿಕಿನಿ ಹಾಕಿಸುವ ಮೂಲಕ ಗೌರವವನ್ನು ಕಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.