ಬಾಕ್ಸಾಫೀಸ್‌ನಲ್ಲಿ 160 ಕೋಟಿ ಬಾಚಿದ ಶಾರುಖ್ ನಟನೆಯ `Pathaan’ ಸಿನಿಮಾ

Public TV
2 Min Read
sharukh khan

ಬಾಲಿವುಡ್‌ಗೆ (Bollywood) ಇದೀಗ ಶುಕ್ರದೆಸೆ ಶುರುವಾಗಿದೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿದ್ದ ಬಾಲಿವುಡ್‌ಗೆ `ಪಠಾಣ್’ (Pathaan) ಚಿತ್ರದ ಮೂಲಕ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿ ಮೂರೇ ದಿನಕ್ಕೆ ಶಾರುಖ್ (Sharukh Khan) ಚಿತ್ರ ಈಗ 160 ಕೋಟಿ ರೂ. ಕಲೆಕ್ಷನ್ ಮಾಡಿದೆ.

sharukh khan`ಜೀರೋ’ (Zero) ಚಿತ್ರದ ಹೀನಾಯ ಸೋಲಿನ ನಂತರ ಶಾರುಖ್ ಸಿನಿಮಾದಿಂದ ದೂರ ಉಳಿದಿದ್ದರು. ಈಗ ಪಠಾಣ್ ಚಿತ್ರದ ಮೂಲಕ ಶಾರುಖ್ ವೃತ್ತಿ ಜೀವನಕ್ಕೆ ಅಷ್ಟೇ ಅಲ್ಲ, ಬಾಲಿವುಡ್‌ಗೂ ಶಕ್ತಿ ಬಂದಂತಾಗಿದೆ. `ಪಠಾಣ್’ (Pathaan) ಬಾಕ್ಸಾಫೀಸ್‌ನಲ್ಲಿ 160 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

ಹಿಂದಿ ಬಾಕ್ಸಾಫೀಸ್‌ನಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ ಸಿನಿಮಾ 161 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾ ಮೂರು ದಿನಗಳಲ್ಲಿ ಒಟ್ಟು ವಿಶ್ವಾದ್ಯಂತ 313 ಕೋಟಿ ರೂ. ಗಳಿಕೆ ಮಾಡಿದೆ.

ಇನ್ನೂ `ಪಠಾಣ್’ ಸಿನಿಮಾ ಶಾರುಖ್ ಖಾನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *