`ಪಠಾಣ್’ ಲುಕ್ ಔಟ್: ಗನ್ ಹಿಡಿದು ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

Public TV
1 Min Read
deepika 1 5

ಬಾಲಿವುಡ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ಖಾನ್‌ಗೆ ನಾಯಕಿಯಾಗಿ `ಪಠಾಣ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ದೀಪಿಕಾ ಲುಕ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

deepikaಬಾದಶಾ ಶಾರುಖ್ ಖಾನ್ ಜತೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಮೋಡಿ ಮಾಡಿದ್ದಾರೆ. ಈಗ ಪಠಾಣ್ ಚಿತ್ರದಲ್ಲೂ ಶಾರುಖ್‌ಗೆ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಚಿತ್ರದಲ್ಲಿನ ದೀಪಿಕಾ ಫಸ್ಟ್ ಲುಕ್ ರಿವೀಲ್ ಆಗಿದ್ದು, ದೀಪಿಕಾ ಎಂದೂ ಕಾಣಿಸಿಕೊಂಡಿರದ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್

ಸಿದ್ಧಾರ್ಥ್ ನಿರ್ದೇಶನದ, ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣದ `ಪಠಾಣ್’ ಚಿತ್ರದಲ್ಲಿ ಗನ್ ಹಿಡಿದು, ಫುಲ್ ಮಾಸ್ ಲುಕ್ಕಿನಲ್ಲಿ ದೀಪಿಕಾ ಮಿಂಚಿದ್ದಾರೆ. ಡಿಪ್ಪಿ ರಗಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಜನವರಿ 25ಕ್ಕೆ ಹಿಂದಿ, ತಮಿಳು, ತೆಲುಗುನಲ್ಲಿ ತೆರೆಗೆ ಅಬ್ಬರಿಸಲಿದೆ. ರಿಲೀಸ್‌ಗೂ ಮುಂಚೆನೇ `ಪಠಾಣ್’ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಹಲ್‌ಚಲ್ ಸೃಷ್ಟಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *