ಫ್ಯಾಮಿಲಿ ಜೊತೆ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಡಿನ್ನರ್ ಡೇಟ್

Public TV
1 Min Read
deepika padukone

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗುವಿನ ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಇದರ ನಡುವೆ ಕುಟುಂಬದ (Family) ಜೊತೆ ಪ್ರೆಗ್ನೆಂಟ್ ದೀಪಿಕಾ ಡಿನ್ನರ್ ಡೇಟ್ ಮಾಡಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

 

View this post on Instagram

 

A post shared by Viral Bhayani (@viralbhayani)

ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಫ್ಯಾಮಿಲಿ ಜೊತೆ ದೀಪಿಕಾ ಪಡುಕೋಣೆ ಊಟ ಸವಿದಿದ್ದಾರೆ. ಅಲ್ಲಿನ ಸ್ಟಾಪ್ ಜೊತೆ ಫೋಟೋಗೆ ನಟಿ ಪೋಸ್ ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್‌ನಿಂದ ಹೊರಬರುವಾಗ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಬೇಬಿ ಬಂಪ್ ಕಾಣದಿರುವ ಲೂಸ್ ಆಗಿರುವ ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಬಿಗ್‌ ಚಾನ್ಸ್-‌ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿ

Deepika Padukone 1

ಅಂದಹಾಗೆ, ಪ್ರಭಾಸ್‌ಗೆ (Prabhas) ನಾಯಕಿಯಾಗಿ ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಈ ಸಿನಿಮಾದ ತಮ್ಮ ಪಾತ್ರಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ನಟಿ ಡಬ್ ಮಾಡಿದ್ದಾರೆ.


ಅದಷ್ಟೇ ಅಲ್ಲ, ಸಿನಿಮಾ ಪ್ರಚಾರಕ್ಕೆ ತೊಂದರೆಯಾಗಬಾರದು ಎಂದು ಮೊದಲೇ ಕಲ್ಕಿ ಚಿತ್ರದ ಬಗ್ಗೆ ಸಂದರ್ಶನ ಕೂಡ ನೀಡಿದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ದೀಪಿಕಾ ಸಂದರ್ಶನ ಪ್ರಸಾರವಾಗಲಿದೆ.

Share This Article