ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಅವರು ತಮ್ಮ ಮದುವೆ ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ ಈಗ ಇಬ್ಬರೂ ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಈಗ ಈ ಜೋಡಿಯ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ನಡೆದು ಬರುವಾಗ ವಿಡಿಯೋ ಮಾಡಲು ಬಂದ ಪಾಪರಾಜಿ ಕ್ಯಾಮೆರಾಗೆ ದೀಪಿಕಾ (Deepika Padukone) ಪಂಚ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಲೂಸ್ ಡ್ರೆಸ್ ಹಾಕಿ ನಟಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರ ಬೇಬಿ ಬಂಪ್ ಲುಕ್ ಕಂಡಿಲ್ಲ. ನಡೆದು ಬರುವಾಗ ಅವರು ಕ್ಯಾಮೆರಾಗೆ ಪಂಚ್ ಕೊಟ್ಟಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿಗಳ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾಗುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ದೀಪಿಕಾಗೂ ಹಾಗೆಯೇ ಆಗಿದೆ ಎನ್ನಲಾಗಿದೆ.
View this post on Instagram
ಸೆಲೆಬ್ರಿಟಿ ಅಂದಮೇಲೆ ಗಾಸಿಪ್‌ಗಳು ಕಾಮನ್. ದೀಪಿಕಾ ಮತ್ತು ರಣ್‌ವೀರ್ ಸಿಂಗ್ ಅನ್ಯೋನ್ಯವಾಗಿದ್ದಾರೆ. ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ:ಅನನ್ಯಾಗೆ ಗುಡ್‌ಬೈ- ಸಾರಾ ಜೊತೆ ‘ಆಶಿಕಿ 2’ ಹೀರೋ ಡೇಟಿಂಗ್?
ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಜೂನ್‌ನಿಂದ ದೀಪಿಕಾ ಪಡುಕೋಣೆ ಬ್ರೇಕ್ ಪಡೆಯಲಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದೀಪಿಕಾ ಹೆರಿಗೆ ನಡೆಯಲಿದೆ.