ಕನ್ನಡದ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ (Bollywood) ನಂಬರ್ ಒನ್ ನಟಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್ ಆಗಿ ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾಗೆ (Priyanka Chopra) ದೀಪಿಕಾ ಟಾಂಗ್ ಕೊಟ್ಟಿದ್ದಾರೆ. ಗೋಬ್ಲಲ್ ಸ್ಟಾರ್ ಆಗಲು ಭಾರತ ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಅಂತ ಪ್ರಿಯಾಂಕಾಗೆ ದೀಪಿಕಾ ಮಾತಿನ ಚಾಟಿ ಬೀಸಿದ್ದಾರೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ, ವೃತ್ತಿಯಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಹಾಲಿವುಡ್ ಸೇರಿದಂತೆ ಬೇರೆ-ಬೇರೆ ಸಿನಿಮಾ ರಂಗಗಳಿಗೆ ಹೋಗುವ ಪ್ರಯತ್ನ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಪಡುಕೋಣೆ, ಗ್ಲೋಬಲ್ ಸ್ಟಾರ್ ಆಗಲು ಭಾರತವನ್ನು ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಎಂದಿದ್ದಾರೆ. ಇದನ್ನೂಓದಿ:ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ
ಈ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳಲು ಭಾರತ ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಗುರುತು ಮೂಡಿಸಲು ನಾನೇಕೆ ನನ್ನ ಲಗೇಜು ಎತ್ತಿಕೊಂಡು ದೇಶ ಬಿಟ್ಟು ಹೊರಡಬೇಕು. ನನಗೆ ಮಾಡೆಲಿಂಗ್ ಸಮಯದಲ್ಲೇ ಹಾಲಿವುಡ್‌ನಿಂದ ಆಫರ್ಸ್ ಬಂದಿತ್ತು ಎಂದು ನಟಿ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಚಿತ್ರರಂಗವನ್ನ ಆಳುತ್ತಿದ್ದಾರೆ. ಪಠಾಣ್, ಜವಾನ್ ಸಕ್ಸಸ್ ನಂತರ ದೀಪಿಕಾಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.