ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ತಾಯ್ತನದ ಖುಷಿಯಲ್ಲಿರುವ ನಟಿ ಈ ನಡುವೆ ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ದುಬಾರಿ ಸೀರೆಯುಟ್ಟು ಕಂಗೊಳಿಸಿದ್ದಾರೆ.
Advertisement
ಗರ್ಭಿಣಿ ದೀಪಿಕಾ ಪಡುಕೋಣೆ ಅನಂತ್ ಅಂಬಾನಿಯ (Ananth Ambani) ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸೀರೆ ಧರಿಸಿ ಮಿರಮಿರ ಮಿಂಚಿದ್ದಾರೆ. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ (Baby Bump) ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ದೀಪಿಕಾ ಧರಿಸಿದ್ದ ಈ ಸೀರೆಯ ಬೆಲೆ 1 ಲಕ್ಷದ 92 ಸಾವಿರ ರೂ. ಮೌಲ್ಯದಾಗಿದೆ. ಸದ್ಯ ಈ ಸೀರೆಯ ರೇಟ್ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.
Advertisement
Advertisement
ಈ ಐಷಾರಾಮಿ ಸೀರೆಯನ್ನು ತಯಾರಿಸಲು 3,400 ತಾಸುಗಳು ಬೇಕಾಯಿತು. ಕೈಗಳಿಂದಲೇ ಹೆಚ್ಚಾಗಿ ಕಸೂತಿ ಮಾಡಿ ಸೀರೆಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಇದನ್ನೂ ಓದಿ:ಹಾವೇರಿ ಅಪಘಾತ: ಮೃತರ ಕುಟುಂಬಸ್ಥರಿಗೆ ಶಿವಣ್ಣ ದಂಪತಿ ಧನ ಸಹಾಯ
Advertisement
ಅಂದಹಾಗೆ, ಇತ್ತೀಚೆಗೆ ದೀಪಿಕಾ ನಟಿಸಿದ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಆಗಿದೆ. ಪ್ರಭಾಸ್, ಬಿಗ್ ಬಿ ಜೊತೆ ದೀಪಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.