ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಹೆಣ್ಣು ಮಗುವಿಗೆ ಸೆ.8ರಂದು ಜನ್ಮ ನೀಡಿದರು. ನಟನೆಯಿಂದ ಅಂತರ ಕಾಯ್ದುಕೊಂಡು ಮಗಳ ಪಾಲನೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇನ್ನೂ ಮೊಮ್ಮಗಳು ದುವಾ ಹುಟ್ಟಿ 3 ತಿಂಗಳಾದ ಖುಷಿಯಲ್ಲಿ ದೀಪಿಕಾ ಅತ್ತೆ ಅಂಜು ಕೂದಲು ದಾನ ಮಾಡಿದ್ದಾರೆ. ಇದನ್ನೂ ಓದಿ:ನಾಮಿನೇಷನ್ ಹಾಟ್ ಸೀಟ್‌ನಲ್ಲಿ 8 ಮಂದಿ- ಈ ಬಾರಿ ಡಬಲ್ ಎಲಿಮಿನೇಷನ್?
ಸೆ.8ರಂದು ಜನಿಸಿದ ದುವಾಗೆ (Dua Padukone Singh) ಈಗ 3 ತಿಂಗಳು ತುಂಬಿದ ಸಂಭ್ರಮದ ಹಿನ್ನೆಲೆ ರಣ್‌ವೀರ್ ಸಿಂಗ್ ತಾಯಿ ಕೂದಲು ದಾನ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನನ್ನ ಪ್ರೀತಿಯ ದುವಾ, ನಾನು ನಿಮಗೆ ಮೂರನೇ ತಿಂಗಳ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ದುವಾ ಬೆಳವಣಿಗೆಯ ಪ್ರತಿ ತಿಂಗಳು ನಾವು ಆಚರಿಸುತ್ತಿದ್ದೇವೆ. ಇದು ಒಳ್ಳೆಯತನ ಮತ್ತು ದಯೆಯ ಶಕ್ತಿಯನ್ನು ಸಹ ನಮಗೆ ನೆನಪಿಸುತ್ತದೆ. ನನ್ನ ಈ ಸಣ್ಣ ಕೆಲಸವು ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವ ಕೆಲವು ಜನರಿಗೆ ಉಪಯುಕ್ತವಾಗಲಿದೆ. ಅವರಿಗೆ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ರಣ್‌ವೀರ್ ತಾಯಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಶೋನಲ್ಲಿ ಪಂಜಾಬಿ ಸಿಂಗರ್ ದಿಲ್ಜಿತ್‌ಗೆ ನಟಿ ಕನ್ನಡ ಕಲಿಸಿದ್ದಾರೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕಾರ್ಯಕ್ರಮಕ್ಕೆ ಸೇರಿದ್ದ ಅಭಿಮಾನಿಗಳಿಗೆ ಎಂದು ಹೇಳಿ ಎಂದು ನಟಿ ಮುದ್ದಾಗಿ ಕನ್ನಡ ಹೇಳಿ ಕೊಟ್ಟಿದ್ದಾರೆ. ನಟಿಯ ನಡೆಗೆ ಕನ್ನಡಿಗರು ಭೇಷ್ ಎಂದಿದ್ದರು. ಇನ್ನೂ ದೀಪಿಕಾರವರು ಕೆಲ ದಿನಗಳ ಕಾಲ ತವರು ಮನೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ.