ಮುಂಬೈ : ಪಂತಜಲಿ(Patanjali) ಸಂಸ್ಥೆಯೂ ಪತಂಜಲಿ ಸಮೂಹ ಸಂಸ್ಥೆಗಳನ್ನು ಆರಂಭಿಸಲು ಸನ್ನದ್ಧವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಹೊಸ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಬಿಡುಗಡೆ ಮಾಡುವ ತಯಾರಿಯಲ್ಲಿದೆ ಎಂದು ಯೋಗ ಗುರು ಬಾಬಾ ರಾಮದೇವ್(Baba Ramdev) ಹೇಳಿದ್ದಾರೆ.
ಮುಂಬರುವ ಐದು ವರ್ಷದಲ್ಲಿ ಪತಂಜಲಿ ಆಯುರ್ವೇದ್, ಪತಂಜಲಿ ವೆಲ್ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸೈಲ್ ಐಪಿಒಗಳನ್ನು ಕಂಪನಿ ಶೇರು ಮಾರುಕಟ್ಟೆಯಲ್ಲಿ(Share Market) ಪಟ್ಟಿ ಮಾಡಲಿದೆ. ಕನಿಷ್ಠ 5-7 ಕಂಪನಿಗಳನ್ನು ಹೊಂದುವ ಚಿಂತನೆ ಇದ್ದು ಸದ್ಯ ನಾಲ್ಕು ಪಟ್ಟಿ ಮಾಡಲು ತಯಾರಿ ಆರಂಭಗೊಂಡಿದೆ.
Advertisement
ಪ್ರಸ್ತುತ ಪತಂಜಲಿಯ ಸಮೂಹದ ವಹಿವಾಟು 40,000 ಕೋಟಿ ರೂ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇದು 1 ಲಕ್ಷ ಕೋಟಿ ಆಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ರಾಮದೇವ್ ಹೇಳಿದ್ದಾರೆ. ಅಲ್ಲದೇ ಈ ಐಪಿಒಗಳೊಂದಿಗೆ 5 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯ ತಲುಪುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ನಿರಾಸೆ – ಕಾಡುತ್ತಿದೆ ಕೂಲ್ ಕ್ಯಾಪ್ಟನ್ ಕೊರತೆ
Advertisement
Advertisement
ಮುಂದಿನ ದಿನಗಳಲ್ಲಿ ಪತಂಜಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಕಂಪನಿಯು 1 ಲಕ್ಷ ಪತಂಜಲಿ ವೆಲ್ನೆಸ್ ಸ್ಟೋರ್‌ಗಳನ್ನು ತೆರೆಯಲು ಯೋಜಿಸಿದೆ. ಪ್ರಸ್ತುತ, ಪತಂಜಲಿ ಫುಡ್ಸ್ ಮಾತ್ರ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಏಕೈಕ ಸಮೂಹ ಕಂಪನಿಯಾಗಿದೆ. ರುಚಿ ಸೋಯಾ(Ruchi Soya) ಎಂದು ಪಟ್ಟಿ ಮಾಡಲಾದ ಈ ಕಂಪನಿಯನ್ನು ಪತಂಜಲಿ ಆಯುರ್ವೇದ್ 2019 ರಲ್ಲಿ ರೆಸಲ್ಯೂಶನ್ ಪ್ರಕ್ರಿಯೆಯ ಅಡಿಯಲ್ಲಿ 4,350 ಕೋಟಿ ರೂ.ಗೆ ಖರೀದಿಸಿತು. ಈ ಕಂಪನಿಯ ನಿವ್ವಳ ಮೌಲ್ಯ ಸುಮಾರು 50,000 ಕೋಟಿ ರೂ. ಆಗಿದ್ದು ಕಂಪನಿಯು ಈಗಾಗಲೇ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ(BSE) ಮತ್ತು ಎನ್‌ಎಸ್‌ಇಯಲ್ಲಿ(NSE) ಪಟ್ಟಿಮಾಡಿದೆ.
Advertisement
ಜೂನ್‌ನಲ್ಲಿ, ಖಾದ್ಯ ತೈಲ ಉತ್ಪಾದಕ ರುಚಿ ಸೋಯಾವನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಪತಂಜಲಿ ಫುಡ್ಸ್ ಷೇರು ಬೆಲೆ ಗುರುವಾರ ಬಿಎಸ್‌ಇಯಲ್ಲಿ ಶೇ.0.5 ಏರಿಕೆಯಾಗಿ 1,349 ರೂ. ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ ಬೆಲೆಯು ಶೇ.20 ಮತ್ತು ಕಳೆದ ಆರು ತಿಂಗಳಲ್ಲಿ ಶೇ. 30 ರಷ್ಟು ಏರಿಕೆಯಾಗಿದೆ.