ನವದೆಹಲಿ: ತ್ವರಿತವಾಗಿ ಮಾರಾಟಮಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಬಾ ರಾಮ್ ದೇವ್ ಅವರ ಸ್ವದೇಶಿ ಪತಂಜಲಿ ಉತ್ಪನ್ನಗಳನ್ನು ಗ್ರಾಹಕರು ಇನ್ನು ಮುಂದೆ ಆನ್ ಲೈನ್ ಶಾಪಿಂಗ್ ತಾಣದಲ್ಲೂ ಖರೀದಿಸಬಹುದು.
ಫ್ಲಿಪ್‍ಕಾರ್ಟ್, ಅಮೆಜಾನ್, ನೆಟ್ ಮೆಡ್ಸ್, ಶಾಪ್ ಕ್ಲೂಸ್, ಪೇಟಿಎಂ, ಗ್ರೋಫರ್ಸ್, 1ಎಂಜಿ ಸೇರಿದಂತೆ ಇತರ ಶಾಪಿಂಗ್ ತಾಣಗಳಲ್ಲೂ ಪತಂಜಲಿ ಉತ್ಪನ್ನಗಳು ಲಭ್ಯವಿರಲಿದೆ. ರೀಟೇಲ್ ಮಾರುಕಟ್ಟೆಯ ಜೊತೆಗೆ ಆನ್ ಲೈನ್‍ನಲ್ಲೂ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಪತಂಜಲಿ ಉತ್ಪನ್ನಗಳನ್ನು ಆನ್ ಲೈನಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
Advertisement
ಪತಂಜಲಿ ಕಂಪೆನಿಯ ಸಿಇಒ ಬಾಲಕೃಷ್ಣ ಮಾತನಾಡಿ, ಯಾರಿಗೆ ರಿಟೇಲ್ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲವೋ ಅವರಿಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
Advertisement
Advertisement
ಫ್ರಾನ್ಸ್ ಕಂಪೆನಿಯಿಂದ ಹೂಡಿಕೆ: ಫ್ರಾನ್ಸ್ ಮೂಲದ ಸಂಸ್ಥೆಯೊಂದು ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಮುಂದೆ ಬಂದಿದೆ. ಫ್ರಾನ್ಸ್ ನ ಚಿಲ್ಲರೆ ಮಾರುಕಟ್ಟೆ ದೈತ್ಯ ಸಂಸ್ಥೆ ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಪತಂಜಲಿ ಸಂಸ್ಥೆಯಲ್ಲಿ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್ ( ಅಂದಾಜು 3250 ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ.
Advertisement
ವಿದೇಶಿ ತಂತ್ರಜ್ಞಾನ ಅಳವಡಿಕೆ ಮಾಡಲು ಪತಂಜಲಿ ಮುಂದಾಗಿದ್ದು ಈಗ ಈಗ ವಿದೇಶಿ ಬಂಡವಾಳವನ್ನೂ ಆಕರ್ಷಿಸಲಾಗುತ್ತಿದೆ. ವಿದೇಶಿ ಬಂಡವಾಳ ಬರುತ್ತದೆ ಎನ್ನುವ ಮಾತ್ರಕ್ಕೆ ಮಾತ್ರಕ್ಕೆ ನಮ್ಮ ಪಾಲುದಾರಿಕೆಯನ್ನು ಬಿಟ್ಟುಕೊಡುತ್ತೇವೆ ಎಂದರ್ಥವಲ್ಲ ಎಂದು ಪತಂಜಲಿಯ ವಕ್ತಾರ ಎಸ್.ಕೆ. ಗುಪ್ತಾ ತಿಜರವಾಲಾ ತಿಳಿಸಿದ್ದಾರೆ.
ಔಷಧ ಮತ್ತು ಸುಗಂಧ ಸಸ್ಯಗಳ ಕೃಷಿಯನ್ನು ಅಸ್ಸಾಂ, ಛತ್ತೀಸ್‍ಗಢ, ನಾಗಪುರ, ಗ್ರೇಟರ್ ನೋಯ್ಡಾ ಆಂಧ್ರಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನಗಳ 10,100 ಎಕರೆ ಪ್ರದೇಶದಲ್ಲಿ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ 5 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಪತಂಜಲಿ ಕಂಪೆನಿ ತಿಳಿಸಿದೆ.
Great to see all the leading eCommerce honchos coming together for first time for a grand tie up Patanjali. Now all these platforms will make Patanjali's range of swadeshi products available to online buyers pic.twitter.com/BdlxnQuBsj
— स्वामी रामदेव (@yogrishiramdev) January 16, 2018
Now world class Patanjali products will be available from Haridwar to Har Dwar, just on a click #PatanjaliOnline pic.twitter.com/phhiiFIyuc
— स्वामी रामदेव (@yogrishiramdev) January 16, 2018
Addressing media along with all eCommerce leaders – Baba Ramdev said through eCommerce we will reach from Haridwar to Har Dwar ! pic.twitter.com/tbGXG6FRqT
— स्वामी रामदेव (@yogrishiramdev) January 16, 2018