– ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಇದೀಗ ಟೇಕಾಫ್
ಬೆಂಗಳೂರು: ಸ್ಪೈಸ್ ಜೆಟ್ ಏರ್‌ಲೈನ್ಸ್ (Spicejet Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ ಟೇಕಾಫ್ ಆಗದ ವಿಮಾನದಲ್ಲೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ.
ಫ್ಲೈಟ್ ನಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದಾರೆ. ಹೀಗಾಗಿ ಪ್ರಯಾಣಿಕರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದರು. ಶುಕ್ರವಾರ ಸಂಜೆ 7 ಗಂಟೆಯಿಂದ ಪ್ರಯಾಣಿಕರು ಫ್ಲೈಟ್‍ನಲ್ಲೆ ಕುಳಿತಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಟ ಅನುಭವಿಸಿದರು.
Advertisement
Advertisement
SG8151 ಸ್ಪೈಸ್ ಜೆಟ್ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿತ್ತು. ಟರ್ಮಿನಲ್ 3 ರಿಂದ ರಾತ್ರಿ 7.40 ಕ್ಕೆ ಟೆಕಾಫ್ ಅಗಬೇಕಿತ್ತು. ಆದರೆ ವಿಮಾನ ಟೆಕಾಫ್ ಆಗದೇ ರನ್ ವೇ ನಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು. ಇದಕ್ಕೆ ಸ್ಪೈಸ್ ಜೆಟ್ ಕಾರಣ ಕೂಡ ಕೊಡದೇ ಇರುವುದರಿಂದ ಪ್ರಯಾಣಿಕರು ವಿಮಾನದೊಳಗೆ ಕುಳಿತು ಪ್ರತಿಭಟನೆ ನಡೆಸಿದರು.
Advertisement
ಕೊನೆಗೂ ಇದೀಗ ವಿಮಾನ ಟೇಕಾಫ್ ಆಗಿದ್ದು, ಇಂದು 9:10ಕ್ಕೆ ವಿಮಾನ ಬೆಂಗಳೂರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ನಿಂತಿರುವುದಾಗಿ ಮಾಹಿತಿ ಲಭಿಸಿದೆ.