– ಮೆಟ್ರೋ ವಿಳಂಬದಿಂದ ಪರದಾಡಿದ ಪ್ರಯಾಣಿಕರು
ಬೆಂಗಳೂರು: ನಮ್ಮ ಮೆಟ್ರೋ (Namma Metro) ಎಡವಟ್ಟಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂಬೇಡ್ಕರ್ ಜಯಂತಿಯ ಸಲುವಾಗಿ ಇಂದು ರಜೆ ಎಂದು ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲಿನ ಸಂಚಾರವಿದ್ದುದರಿಂದ ಮೆಟ್ರೋ ಸ್ಟೇಷನ್‌ಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.
Unacceptable mismanagement at Majestic Metro Station this morning. Reducing train frequency to 10 mins during peak hours, assuming everyone has a holiday, created absolute chaos. BMRCL must plan better in such cases and restore normal frequency immediately. pic.twitter.com/rkp7VPIKKi
— P C Mohan (@PCMohanMP) April 14, 2025
ಉಳಿದೆಲ್ಲಾ ದಿನದಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತದೆ. ಆದರೆ ಇಂದು ಹತ್ತು ನಿಮಿಷಕ್ಕೊಂದು ಮೆಟ್ರೋ ಸೇವೆ ಇದ್ದುದರಿಂದ ಸ್ಟೇಷನ್‌ನಲ್ಲಿ ಜನದಟ್ಟಣೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ
ಸಾಮಾನ್ಯವಾಗಿ ಭಾನುವಾರ ಮಾತ್ರ ಈ ರೀತಿ ಮಾಡುತ್ತಿದ್ದ ಮೆಟ್ರೋ ಸಂಸ್ಥೆಯು, ಈಗ ಸಾರ್ವತ್ರಿಕ ರಜಾ ದಿನವೂ ಮೆಟ್ರೋ ಸೇವೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೆಟ್ರೋ ವಿರುದ್ಧ ಸಂಸದ ಪಿ.ಸಿ.ಮೋಹನ್ ವೀಡಿಯೋ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್