ಬೆಂಗಳೂರು: ಪ್ರಯಾಣಿಕನ ಮೇಲೆ ಮೆಟ್ರೋ ಸಿಬ್ಬಂದಿಯೊಬ್ಬರು ದರ್ಪ ತೋರಿದ ಘಟನೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
2 ರೂ. ಚಿಲ್ಲರೆಗಾಗಿ ಮೆಟ್ರೋ ಟಿಕೆಟ್ ಎಕ್ಸಿಟ್ ಗೇಟ್ ಬಳಿ ಪ್ರಯಾಣಿಕನನ್ನು ನಿಲ್ಲಿಸಿ ತೊಂದರೆ ಕೊಟ್ಟಿದ್ದಾರೆ. ಪ್ರದೀಪ್ ಎಂಬವರು ಲಾಲ್‍ಬಾಗ್‍ನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಲಾಲ್‍ಬಾಗ್‍ನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಟಿಕೆಟ್ ದರ 22 ರೂ. ಇದೆ. ಆದರೆ ಅಲ್ಲಿನ ಸಿಬ್ಬಂದಿ 20 ರೂ. ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ.
Advertisement
Advertisement
ಮೆಟ್ರೋ ಸಿಬ್ಬಂದಿ ಎಡವಟ್ಟಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮೆಟ್ರೋ ಸ್ಟೇಷನ್‍ನಿಂದ ಹೊರ ಬಿಡದೇ ಪ್ರಯಾಣಿಕನನ್ನು ಸತಾಯಿಸಿದ್ದಾರೆ. ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಾಗ 2 ರೂ. ಚಿಲ್ಲರೆ ಕೊಟ್ಟು ನಿರ್ಗಮಿಸಿ ಎಂದು ಪ್ರಯಾಣಿಕನಿಗೆ ಎಎಸ್‍ಓ ಮೆಟ್ರೋ ಸಿಬ್ಬಂದಿ ಪುಟ್ಟಸ್ವಾಮಿ ಅವಾಜ್ ಹಾಕಿದ್ದಾನೆ. ಚಿಲ್ಲರೆ ಇಲ್ಲ. ನೀವೇ ಕೊಡಿ ಸರ್ ಎಂದು ಪ್ರಯಾಣಿಕ ಹೇಳಿದಾಗ ಪ್ರಯಾಣಿಕನ ಮೇಲೆ ಪುಟ್ಟಸ್ವಾಮಿ ರೇಗಾಡಿದ್ದಾನೆ.
Advertisement
ಚಿಲ್ಲರೆ ಕೊಟ್ಟೇ ಇಲ್ಲಿಂದ ಎಕ್ಸಿಟ್ ಆಗಬೇಕು ಎಂದು ಅರ್ಧಗಂಟೆಗೂ ಹೆಚ್ಚು ಕಾಲ ಮೆಟ್ರೋ ನಿಲ್ದಾಣದಲ್ಲೇ ನಿಲ್ಲಿಸಿಕೊಂಡಿದ್ದಾರೆ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕು ಸರ್ ಎಂದು ಪ್ರಯಾಣಿಕ ಎಷ್ಟೇ ಮನವಿ ಮಾಡಿದರೂ, ಮೆಟ್ರೋ ನಿಲ್ದಾಣದಿಂದ ಹೊರ ಬಿಟ್ಟಿಲ್ಲ. ಪೊಲೀಸರಿಗೆ ಹೇಳಿ ಒದ್ದಿಸ್ತಿನಿ ಎಂದು ಪ್ರಯಾಣಿಕನಿಗೆ ಹೆದರಿಸಿ, ರಾಜನಕುಂಟೆ ಪೊಲೀಸರಿಗೆ ಪುಟ್ಟಸ್ವಾಮಿ ಕರೆ ಮಾಡಿ ಪ್ರಯಾಣಿಕನಿಗೆ ಧಮ್ಕಿ ಹಾಕಿದ್ದಾನೆ.