ಇಂಫಾಲ್: ಪ್ರಯಾಣಿಕನೋರ್ವ ಗುದನಾಳದಲ್ಲಿ ಬಚ್ಚಿಟ್ಟುಕೊಂಡಿದ್ದ 900 ಗ್ರಾಂ ತೂಕದ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್‌ನನ್ನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ಮಣಿಪುರದ ಇಂಫಾಲ್ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಸ್, ಟ್ರಕ್ ನಡುವೆ ಡಿಕ್ಕಿ – 7 ಮಂದಿ ಸಾವು, 14 ಮಂದಿಗೆ ಗಾಯ
ಆರೋಪಿ ಕೇರಳ ಮೂಲದ ವ್ಯಕ್ತಿಯಾಗಿದ್ದು, ಇಂಫಾಲದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದನು. ಆದರೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಎಚ್ಚೆತ್ತ ಸಿಐಎಸ್‍ಎಫ್ ಅಧಿಕಾರಿಗಳು ಪ್ರಯಾಣಿಕನ ಗುದನಾಳದ ಒಳಗೆ ಚಿನ್ನ ಇರುವುದನ್ನು ಗಮನಿಸಿದ್ದಾರೆ. ಬಳಿಕ ಈ ಕುರಿತಂತೆ ವಿಚಾರಣೆ ನಡೆಸಿದಾಗ ಆರೋಪಿ ಸರಿಯಾಗಿ ಉತ್ತರ ನೀಡದೇ ಇದ್ದ ಕಾರಣ ಅನುಮಾನಗೊಂಡ ಅಧಿಕಾರಿಗಳು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಎಕ್ಸ್-ರೇಯಲ್ಲಿ ಆರೋಪಿ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿರುವ ವಿಚಾರ ಬಹಿರಂಗಗೊಂಡಿದೆ.
Advertisement
Advertisement
ನಂತರ ಆರೋಪಿ ತನ್ನ ಗುದನಾಳದಲ್ಲಿ ಚಿನ್ನದ ಪೇಸ್ಟ್ ಅಡಗಿಸಿಟ್ಟಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೆ ಭದ್ರತಾ ಪಡೆ ಆರೋಪಿ ಮತ್ತು ಆತನ ಬಳಿ ಇದ್ದ 4 ಪ್ಯಾಕೆಟ್ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಅಧಿಕಾರಿಗಳು ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲಿನಲ್ಲಿ ಐಸ್ ಕ್ರೀಂ ಆಕಾರದ ಇಡ್ಲಿ- ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್
Advertisement
ಆರೋಪಿಯನ್ನು ಮೊಹಮ್ಮದ್ ಶರೀಫ್ ಎಂದು ಗುರುತಿಸಲಾಗಿದ್ದು, ಈತ ಕೇರಳದ ಕೋಯಿಕ್ಕೋಡ್ ಮೂಲದವನಾಗಿದ್ದು, ಸೋಮವಾರ ಮಧ್ಯಾಹ್ನ 2:40ಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಇಂಫಾಲದಿಂದ ದೆಹಲಿಗೆ ಹೋಗಲು ನಿರ್ಧರಿಸಿದ್ದನು ಎಂಬ ಸತ್ಯ ತಿಳಿದುಬಂದಿದೆ.
Advertisement
.