ಲಕ್ನೋ: ದೆಹಲಿಯಿಂದ ಲಕ್ನೋಗೆ ಪ್ರಯಾಣಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಕ್ನೋ (Lucknow) ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Chaudhary Charan Singh International Airport) ನಡೆದಿದೆ.
ಮೃತರನ್ನು ಬಿಹಾರದ (Bihar) ಗೋಪಾಲ್‌ಗಂಜ್‌ನ ಆಸಿಫುಲ್ಲಾ ಅನ್ಸಾರಿ(52) ಎಂದು ಗುರುತಿಸಲಾಗಿದೆ. ಬೆಳಗ್ಗೆ 8:10ಕ್ಕೆ ವಿಮಾನ ಲಕ್ನೋದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ, ಸಿಬ್ಬಂದಿ ಆಸಿಫುಲ್ಲಾರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಇದನ್ನೂ ಓದಿ: ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ
ಈ ವೇಳೆ ಆಸಿಫುಲ್ಲಾರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಪ್ರಯಾಣದ ಮಧ್ಯೆ ಆಸಿಫುಲ್ಲಾ ಅವರು ಮೃತಪಟ್ಟಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಕೋಲಾಹಲ- ಸ್ಪೀಕರ್ ಮೇಲೆ ಪೇಪರ್ ಎಸೆತ
ಮರಣೋತ್ತರ ಪರೀಕ್ಷೆಗೆ ಮೃತ ದೇಹ ರವಾಸಿದ್ದಾರೆ. ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.