ಬಳ್ಳಾರಿ: ತುಂಗಭದ್ರಾ ಜಲಾಶಯದ ಎಲ್‍ಎಲ್‍ಸಿ ಕಾಲುವೆಗೆ ಆಟೋವೊಂದು ಉರುಳಿ ಬಿದ್ದು ಹಲವು ಪ್ರಯಾಣಿಕರು ಜಲಸಮಾಧಿಯಾದ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಂಡೂರು ರಸ್ತೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಪ್ರಯಾಣಿಕರಿದ್ದ ಆಟೋವೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಆಟೋ ಸೇರಿದಂತೆ ಆಟೋದಲ್ಲಿದ್ದ ಪ್ರಯಾಣಿಕರು ಸಹ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ಯುವಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ರಾತ್ರಿಯಾದರೂ ಆಟೋ ಮತ್ತು ಪ್ರಯಾಣಿಕರು ಪತ್ತೆಯಾಗಿಲ್ಲ.
ಕಾಲುವೆ ಸುಮಾರು 20 ಅಡಿಗಿಂತ ಜಾಸ್ತಿ ಆಳವಿದೆ. ಕಾಲುವೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಆಟೋದ ಸಿಲೆಂಡರ್ ಪತ್ತೆಯಾಗಿದೆ. ಅದು ಸಹ ನೀರಿನ ರಭಸಕ್ಕೆ ತೇಲಿಕೊಂಡು ಹೋಗಿದೆ. ಆದರೆ ಆಟೋ ಮಾತ್ರ ಪತ್ತೆಯಾಗಿಲ್ಲ. ಆಟೋ ದೊರಕಿದ ಬಳಿಕ ಆಟೋದಲ್ಲಿದ್ದವರ ಬಗ್ಗೆ ಮಾಹಿತಿ ಸಿಗುತ್ತದೆ ಎನ್ನುವ ಮಾಹಿತಿಯನ್ನು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ. ಸದ್ಯ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv