ಯಾದಗಿರಿ: ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ನಡಿಹಾಳ ಬಳಿ ನಡೆದಿದೆ.
ಘಟನೆಯಲ್ಲಿ 20 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕನ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡವರನ್ನು ಶಹಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಹಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಇಂದು ಮಧ್ಯಾಹ್ನ ಶಹಪುರದಿಂದ ಕೆಂಭಾವಿಗೆ ಕಡೆಗೆ ಹೋಗುತಿತ್ತು. ಮಾರ್ಗ ಮಧ್ಯೆ ಏಕಾಏಕಿ ಬಸ್ಸಿನ ಆಕ್ಸಲ್ ಕಟ್ ಆದ ಪರಿಣಾಮ, ಪಲ್ಟಿ ಹೊಡೆದು ಅಪಘಾತಕ್ಕೊಳಗಾಗಿದೆ.
Advertisement
Advertisement
ಬಸ್ ಪಲ್ಟಿಯಾದ ಪರಿಣಾಮ ಹೊರ ಬರಲಾಗದೇ ಮೂವರು ಪ್ರಯಾಣಿಕರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಹೊರ ಕರೆತಂದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಎಸ್‍ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಸದ್ಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.