ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ

Public TV
2 Min Read
paska festival 2

ಮಂಗಳೂರು: ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ಏ.12, 13 ರಂದು ಮಂಗಳೂರಿನ (Mangaluru) ವಳಚ್ಚಿಲ್ ಮತ್ತು ಬೆಂಗಳೂರಿನ (Bengaluru) ಬೂದಿಗೆರೆಯಲ್ಲಿ ಅದ್ದೂರಿಯಾಗಿ ಪಸ್ಕ ಹಬ್ಬ (Paska Festival) ಆಚರಿಸಲಾಯಿತು. ಒಡಂಬಡಿಕೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಆಚರಣೆ ಮಾಡಲಾಯಿತು.

paska festival scaled

ಪಸ್ಕ ಹಬ್ಬ ಸಂದರ್ಭದಲ್ಲಿ ಗುಡ್ ಫ್ರೈಡೇ ಸಡಗರದ ಜೊತೆಗೆ ಇದೇ ಮೊದಲ ಬಾರಿಗೆ ಚರ್ಚ್ ಆವರಣದಲ್ಲಿ ಬೈಬಲ್ ಪ್ರೇರಿತ ಒಡಂಬಡಿಕೆ ಮಂಜೂಷ ಪೆಟ್ಟಿಗೆಯನ್ನ ಅದ್ದೂರಿಯಾಗಿ ಬರಮಾಡಿಕೊಂಡು ಏಳು ಸುತ್ತುಗಳ ಮೆರವಣಿಗೆಯ ನಂತರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು. ಇದನ್ನೂ ಓದಿ: ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

paska festival 1 scaled

ದೇಶ-ವಿದೇಶಗಳಿಂದ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಸ್ಕ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಬಿಷಪ್ ಡಾ. ಆಂಡ್ರೋ ರಿಚರ್ಡ್ ಅವರು ಪಸ್ಕ ಹಾಗೂ ಮಂಜೂಷ ಪೆಟ್ಟಿಗೆಯ ಮಹತ್ವವನ್ನ ಭಕ್ತರಿಗೆ ಸಾರಿದರು.

paska festival 3

ಇದೇ ವೇಳೆ, ಗ್ರೇಸ್ ಮಿನಿಸ್ಟ್ರಿ ನಿರ್ದೇಶಕ ಹಾಗೂ ಸಂಸ್ಥಾಪಕ ಡಾ.ಆಂಡ್ರ್ಯೂ ರಿಚರ್ಡ್ ಮಾತನಾಡಿ, ಈ ವರ್ಷ ಪಸ್ಕ ಹಬ್ಬದ ಜೊತೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಮಾಡಿರುವ ಸಂಸ್ಥೆ ಎಂದು ಹೇಳುವುದಕ್ಕೆ ಸಂತೋಷ ಪಡುತ್ತೇನೆ ಎಂದರು. ಹಬ್ಬದ ಪ್ರಯುಕ್ತ ಬಡಮಕ್ಕಳ ಉಚಿತ ಶಿಕ್ಷಣಕ್ಕಾಗಿ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮುದಾಯದ ಮಕ್ಕಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು 2024ರ ಪಸ್ಕ ಹಬ್ಬ ಆಚರಿಸಿದ ಸಂದರ್ಭ ಬಡ ಚರ್ಚ್ ಒಂದು ಹಣಕಾಸಿನ ತೊಂದರೆಯಿಂದಾಗಿ ಅರ್ಧದಲ್ಲಿ ನಿಂತು ಹೋಗಿತ್ತು. ಗ್ರೇಸ್ ಮಿನಿಸ್ಟ್ರಿ ಸಂಸ್ಥೆಯಿಂದ 8 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಆ ಚರ್ಚಿನ ಸಂಪೂರ್ಣ ನಿರ್ಮಾಣಕ್ಕೆ ಸಂಸ್ಥೆ ದಾರಿ ಮಾಡಿಕೊಟ್ಟಿದೆ ಎಂದರು. ಇದನ್ನೂ ಓದಿ: ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಎಕ್ಸಾಂ ಬರೆಯೋಕೆ ಆಗುತ್ತಾ? – ಚಕ್ರವರ್ತಿ ಸೂಲಿಬೆಲೆ

ಪ್ರತಿ ವರ್ಷ ಪಸ್ಕ ಹಬ್ಬ ಆಯೋಜಿಸಲಾಗುತ್ತಿದ್ದು, ಆ ಮೂಲಕ ಬಡವರು, ಅನಾಥರು, ಬಡ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ಒಡಂಬಡಿಕೆ ಮಂಜೂಷ ಪೆಟ್ಟಿಗೆ ಸ್ಥಾಪನೆಯ ನಂತರ ಸಾವಿರಾರು ಭಕ್ತಾದಿಗಳು ಸಾಲು ಸಾಲಿನಲ್ಲಿ ನಿಂತು ತಮ್ಮ ಪ್ರಾರ್ಥನಾ ಮನವಿಗಳನ್ನು ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.

Share This Article