ಮಾಲಿವುಡ್‌ನಲ್ಲಿ ರಚಿಸಲಾದ ಹೇಮಾ ಸಮಿತಿ ವರದಿ (Hema Committee) ಸಂಚಲನ ಸೃಷ್ಟಿಸಿದೆ. ಕೇರಳದ ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿ ಬಂದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ (Pash Committee) ಮಾಡುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿದ್ದಾರೆ. ಇದನ್ನೂ ಓದಿ:400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ
ಇಂದು (ಸೆ.16) ಫಿಲ್ಮ್ ಚೇಂಬರ್‌ನಲ್ಲಿ ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ನಡೆದ ಮಹಿಳೆಯ ಸುರಕ್ಷೆಯ ಕುರಿತಾದ ಸಭೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ಪೋಷಕರು ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಪೋಷಕರು ಹೇಳುತ್ತಾರೆ. ಇದರಿಂದ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರುತ್ತಾರಾ ಎಂಬ ಪ್ರಶ್ನೆ ಮೂಡುವಂತೆ ಆಗಿದೆ ಎಂದಿದ್ದಾರೆ.
ವಾಣಿಜ್ಯ ಮಂಡಳಿ ತಾಯಿ ಸಂಸ್ಥೆಯಾಗಿದೆ. ಕೆಲಸ ಮಾಡುವ ಜಾಗದಲ್ಲಿ ಕೆಲವು ಅಗತ್ಯತೆಯನ್ನು ಪೂರೈಸಬೇಕು. ಮಹಿಳೆಯರ ಸುರಕ್ಷತೆಯ ಪರವಾಗಿ ಸರ್ವೇ ಮಾಡ್ತೀವಿ ಯಾರ ಹೆಸರು ಬೇಕಾದರೂ ಬರಬಹುದು. ಅದು ಕಾನ್ಫಿಡೆನ್ಷಿಯಲ್ ಎಂದಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ‘ಪಾಶ್’ ಕಮಿಟಿ ರಚನೆ ಮಾಡಲು ಮತ್ತೊಂದು ಸಭೆ ಕರೆಯಲಾಗುತ್ತದೆ. ಇದು ನಡೆದಿರೋದು ಪ್ರಾಥಮಿಕ ಮೀಟಿಂಗ್ ಆಗಿದ್ದು, ಕಲೆಕ್ಟಿವ್ ಡಿಸೀಷನ್‌ಗೆ ಬರಬೇಕು ಅಂದರೆ 24 ಅಂಗ ಸಂಸ್ಥೆಗಳು ಬರಬೇಕು ಎಂದಿದ್ದಾರೆ.
ಕಮಿಟಿ ಹೀಗೆ ಇರಬೇಕು ಎಂದು ಕಾನೂನು ಇದೆ. ಅದೇ ರೀತಿ ಸಮಿತಿ ರಚನೆ ಆಗಲಿದೆ. ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್ ಇದೆ. ಯಾವ ಯಾವ ಫೆಸಿಲಿಟಿ ನೀಡಬೇಕು ಎಂದು ಉಲ್ಲೇಖವಿದೆ. ಸರ್ಕಾರದ ಈ ಬಜೆಜ್‌ನಲ್ಲಿ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.