ಮೈಸೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಬಾಲ್ಯದ ಗೆಳತಿ ಜಾನಕಮ್ಮ, ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ.
ಪಾರ್ವತಮ್ಮ ಅವರಿಗೆ ಇದ್ದಿದ್ದು ಒಬ್ಬರೇ ಬಾಲ್ಯದ ಗೆಳತಿ. ಆ ಬಾಲ್ಯದ ಗೆಳತಿ ಹೆಸರು ಜಾನಕಮ್ಮ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಪಾರ್ವತಮ್ಮ ಅವರ ಹುಟ್ಟೂರು. ಅಲ್ಲಿ ಅವರು ಪ್ರಾಥಮಿಕ ಶಾಲೆ ಕಲಿಯುವಾಗ ಜೊತೆಗಾತಿ ಆಗಿದ್ದವರು ಜಾನಕಮ್ಮ. ಇವತ್ತು ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ. ಗೆಳತಿಯನ್ನು ಕಳೆದಕೊಂಡ ದುಃಖ ಅವರಲ್ಲಿ ತುಂಬಿದೆ.
Advertisement
ಪಾರ್ವತಮ್ಮ ಅವರೊಂದಿಗಿನ ಬಾಲ್ಯದ ಒಡನಾಟದ ಬಗ್ಗೆ ಮಾತನಾಡಿದ ಜಾನಕಮ್ಮ, ನನಗೂ, ಅವರಿಗೂ(ಪಾರ್ವತಮ್ಮ) 5ನೇ ಕ್ಲಾಸ್‍ಗೆ ಪರಿಚಯವಾಯಿತು. ಅಂದಿನಿಂದ 8ನೇ ತರಗತಿವರೆಗೂ ನಾವು ಜೊತೆಯಲ್ಲಿಯೇ ಓದಿದ್ದು. 8ನೇ ಕ್ಲಾಸ್ ನಂತರ ನನ್ನನ್ನು ಶಾಲೆ ಬಿಡಿಸಿದ್ರು. ಅವರು ಹೈಸ್ಕೂಲ್ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಮದುವೆಯಾಗುವವರೆಗೂ ಪ್ರತಿದಿನ ನಮ್ಮ ಮನೆಗೆ ಬರ್ತಿದ್ರು. ಅವರ ಮದುವೆಗೆ ಹೋಗೋಕೆ ಅಗ್ಲಿಲ್ಲ. ರಾಜ್‍ಕುಮಾರ ಅವರನ್ನು ವಿವಾಹವಾದ ನಂತರವೂ ಕೆಲವು ಬಾರಿ ನಮ್ಮ ಮನೆಗೆ ಬಂದಿದ್ದರು. ಒಮ್ಮೆ ರಾಜ್‍ಕುಮಾರ್ ಅವರು ಬಸ್ ಸ್ಟಾಪ್‍ನಲ್ಲಿ ಕುಳಿತು ನಿನ್ನ ಸ್ನೇಹಿತೆಯನ್ನು ಮಾತನಾಡಿಸಿಕೊಂಡು ಬಾ ಅಂತ ಪಾರ್ವತಮ್ಮರನ್ನ ನಮ್ಮ ಮನೆಗೆ ಕಳಿಸಿದ್ರು. ಅಷ್ಟು ಜೊತೆಯಲ್ಲಿದ್ದವರು ಈಗ ಇಲ್ಲ. ತುಂಬಾ ಬೇಜಾರಾಗುತ್ತದೆ ಎಂದು ಗದ್ಗದಿತರಾದ್ರು.
Advertisement
ಪಾರ್ವತಮ್ಮ ರಾಜಕುಮಾರ್ ಹುಟ್ಟಿದ್ದು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ. 1953 ಡಿಸೆಂಬರ್ 6 ರಂದು ಅಪ್ಪಾಜಿಗೌಡರ ಎರಡನೇ ಮಗಳಾಗಿ ಜನ್ಮ ತಾಳುತ್ತಾರೆ. ಮದುವೆ ಆಗುವವರೆಗೂ ಅವರು ಸಾಲಿಗ್ರಾಮದಲ್ಲೆ ಇರುತ್ತಾರೆ. ಇವತ್ತಿಗೂ ಸಾಲಿಗ್ರಾಮದಲ್ಲಿ ಅವರು ಹುಟ್ಟಿ ಬೆಳೆದ ಮನೆ ಇದೆ. ಇಡೀ ಗ್ರಾಮಕ್ಕೆ ಆ ಮನೆಯೂ ಒಂದು ರೀತಿ ದೊಡ್ಮನೆ.
Advertisement
Advertisement