ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲು

Public TV
1 Min Read
Parwatamma Rajkumar 1

– ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಬೆಂಗಳೂರು: ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾರ್ವತಮ್ಮ ರಾಜ್‍ಕುಮಾರ್(77) ಅವರನ್ನು ನಗರದ ಎಂ.ಎಸ್.ರಾಮಾಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆಸ್ಪತ್ರೆಯಲ್ಲಿ ಪಾರ್ವತಮ್ಮ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ಮಧ್ಯರಾತ್ರಿ 12 ಸುಮಾರಿಗೆ ಮನೆಯಲ್ಲೇ ತಲೆಸುತ್ತು ಕಾಣಿಸಿಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಾರ್ವತಮ್ಮನವರನ್ನ ಕೂಡಲೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮೊಮ್ಮಗ ಆಸ್ಪತ್ರೆಗೆ ದಾಖಲಿಸಿದ್ದಾರೆ.

parwatamma 1 1

ಮಧ್ಯರಾತ್ರಿ 1 ಗಂಟೆಗೆ ಶಿವರಾಜ್‍ಕುಮಾರ್, ಪತ್ನಿ ಗೀತಾ, ಪುನೀತ್ ರಾಜ್‍ಕುಮಾರ್, ಮಗಳು ಲಕ್ಷ್ಮಿ, ಸೊಸೆ ಮಂಗಳ, ಮೊಮ್ಮಗ ಗುರು ರಾಘವೇಂದ್ರ ಕೂಡ ಆಸ್ಪತ್ರೆಗೆ ಬಂದು ಪಾರ್ವತಮ್ಮನವ್ರ ಆರೋಗ್ಯ ವಿಚಾರಣೆ ಮಾಡಿದ್ರು. ಮಧ್ಯರಾತ್ರಿಯೇ ಎಂಆರ್‍ಐ ಸ್ಕ್ಯಾನ್, ಹಲವು ರಕ್ತ ಪರೀಕ್ಷೆ ನಡೆಸಿದ್ದು ಅವರ ಆರೋಗ್ಯ ಸುಧಾರಿಸ್ತಿದೆ. ಇನ್ನೆರಡು ದಿನ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ನೀಡಿ ಆಮೇಲೆ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

 

Share This Article