ಬೆಂಗಳೂರು: ಪಾರ್ವತಮ್ಮ ರಾಜ್ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಾರ್ವತಮ್ಮ ರಾಜ್ಕುಮಾರ್ ಅವರ ಆರೋಗ್ಯದ ಬಗ್ಗೆ ಇಂದು ವೈದ್ಯರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಮುಖ್ಯ ವೈದ್ಯ ಡಾ. ನರೇಶ್ ಮಾತನಾಡಿ, ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಉಸಿರಾಡಲು ಸ್ವಲ್ಪ ಕಷ್ಟವಾಗುತ್ತಿದೆ.ಈಗ ಮೆಕ್ಯಾನಿಕಲ್ ವೆಂಟಿಲೇಟರ್ ನಲ್ಲಿ ಇದ್ದಾರೆ. ಕಿಡ್ನಿ ಸಣ್ಣ ಫೇಲ್ಯೂರ್ ಆಗಿದೆ. ಡಯಾಲಿಸಿಸ್ ಮಾಡಬೇಕೋ ಬೇಡವೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಇಂದು ಮಧ್ಯಾಹ್ನದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಆರೋಗ್ಯದ ಮಾಹಿತಿಯ ಬಗ್ಗೆ ಮೆಡಿಕಲ್ ಬುಲೆಟಿನ್ ಪ್ರಕಟಿಸುತ್ತೇವೆ ಎಂದು ವೈದ್ಯರು ತಿಳಿಸಿದರು.
Advertisement
ನಿನ್ನೆಗೆ ಹೋಲಿಸಿದರೆ ಇವತ್ತು ಆರೋಗ್ಯ ಸ್ವಲ್ಪ ಸುಧಾರಣೆಯಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿಸಬೇಡಿ. ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಮಾಡಿ ಎಂದು ಜನರಲ್ಲಿ ವೈದ್ಯರು ಮನವಿ ಮಾಡಿದ್ದಾರೆ.
Advertisement
ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದಾಗಿ ಪಾರ್ವತಮ್ಮ ರಾಜ್ಕುಮಾರ್ ಸೋಮವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು.